ಇಂದೋರ್: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟ್ರೋಫಿಯ ಪ್ರದರ್ಶನ ಪ್ರವಾಸವು ಮಧ್ಯಪ್ರದೇಶದ ಇಂದೋರ್ ತಲುಪಿತು.

ನಗರದ ಐತಿಹಾಸಿಕ ಸ್ಥಳಗಳಾದ ರಾಜವಾಡಾ ಅರಮನೆ, ಗಾಂಧಿ ಹಾಲ್, ಸೆಂಟ್ರಲ್ ಮ್ಯೂಸಿಯಂ, ಸಿರಪುರ್ ಲೇಖ್ ಮತ್ತು ಪಿತ್ರಾ ಪರ್ವತದಲ್ಲಿ ಟ್ರೋಫಿಯನ್ನು ಪ್ರದರ್ಶಿಸಲಾಯಿತು.

ಇಂದೋರ್ನಲ್ಲಿ ವಿಶ್ವಕಪ್ ಟೂರ್ನಿಯ ಐದು ಪಂದ್ಯಗಳು ಆಯೋಜನೆಗೊಳ್ಳಲಿವೆ. ಟ್ರೋಫಿ ಪ್ರವಾಸವನ್ನು ಈ ನಗರದಲ್ಲಿ ಐದು ದಿನಗಳ ಕಾಲ ಅಯೋಜಿಸಲಾಯಿತು. ಕೆಲವು ಶಾಲೆಗಳಲ್ಲಿಯೂ ಈ ಟ್ರೋಫಿಯನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ಟ್ರೋಫಿಯನ್ನು ಗೌರವ ರಕ್ಷೆ ನೀಡಿ ಬರ ಮಾಡಿಕೊಂಡರು. ಕ್ರಿಕೆಟ್ ವಿಷಯಕ್ಕೆ ಸಂಬಂಧಿಸಿದ ಗೇಮ್ಸ್ ಮತ್ತು ಕ್ವಿಜ್ಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ಅವರಿಗೆ ಐಸಿಸಿಯ ಪೋಷಾಕು ಮತ್ತು ಕಾಣಿಕೆಗಳನ್ನು ನೀಡಲಾಯಿತು.

19 ವರ್ಷದೊಳಗಿನವರ ಭಾರತ ತಂಡದ ಆಟಗಾರ್ತಿ ಆಯುಷಿ ಶುಕ್ಲಾ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.