ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ವಿರುದ್ಧದ ಪಂದ್ಯದತ್ತ ಗಮನ -ಹರ್ಮನ್‌ಪ್ರೀತ್‌ ಕೌರ್‌

Last Updated 6 ಫೆಬ್ರುವರಿ 2023, 5:56 IST
ಅಕ್ಷರ ಗಾತ್ರ

ಕೇಪ್‌ಟೌನ್‌ : ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ನ (ಡಬ್ಲ್ಯುಪಿಎಲ್‌) ಆಟಗಾರ್ತಿಯರ ಹರಾಜು ಪ್ರಕ್ರಿಯೆ ಕುತೂಹಲ ಮೂಡಿಸಿದೆಯಾದರೂ, ಪಾಕಿಸ್ತಾನ ವಿರುದ್ಧದ ಪಂದ್ಯದ ಮೇಲೆ ಗಮನಹರಿಸಿದ್ದೇವೆ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಫೆ.12 ರಂದು ಪಾಕಿಸ್ತಾನ ವಿರುದ್ಧ ಪೈಪೋಟಿ ನಡೆಸಲಿದೆ. ಮರುದಿನ (ಫೆ.13) ಮುಂಬೈನಲ್ಲಿ ಡಬ್ಲ್ಯುಪಿಎಲ್‌ ಹರಾಜು ಪ್ರಕ್ರಿಯೆ ನಡೆಯಲಿದೆ.

‘ಹರಾಜು ಪ್ರಕ್ರಿಯೆಗೆ ಮುನ್ನ ನಮಗೆ ಅತ್ಯಂತ ಮಹತ್ವದ ಪಂದ್ಯ ಆಡಬೇಕಿದೆ. ತಂಡದ ಎಲ್ಲ ಸದಸ್ಯರೂ ಆ ಪಂದ್ಯದತ್ತ ಗಮನ ಕೇಂದ್ರೀಕರಿಸಿದ್ದಾರೆ’ ಎಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘ವಿಶ್ವಕಪ್‌ ಟೂರ್ನಿ ಇತರ ಎಲ್ಲಕ್ಕಿಂತಲೂ ಮಹತ್ವದ್ದಾಗಿದೆ. ನಮ್ಮ ಗಮನ ಐಸಿಸಿ ಟ್ರೋಫಿಯತ್ತ ನೆಟ್ಟಿದೆ. ಒಬ್ಬ ಆಟಗಾರ್ತಿಯಾಗಿ ನಿಮಗೆ ಯಾವುದು ಮುಖ್ಯವಾದುದು ಎಂಬುದು ತಿಳಿದಿರಬೇಕು. ಈ ಸಮಯ ದಲ್ಲಿ ಯಾವುದು ಮುಖ್ಯ ಎಂಬುದನ್ನು ತಿಳಿಯುವಷ್ಟು ನಾವೆಲ್ಲರೂ ಪ್ರಬುದ್ಧರಾಗಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT