ನವದೆಹಲಿ: ಭಾರತದ ಕ್ರಿಕೆಟ್ನಲ್ಲಿ ಮೆಗಾ ಸ್ಟಾರ್ ಸಂಸ್ಕೃತಿಯನ್ನು ಯಾವಾಗಲೂ ವಿರೋಧಿಸುತ್ತಲೇ ಬಂದವರು ಗೌತಮ್ ಗಂಭೀರ್. ಇಂಗ್ಲಿಷ್ ನಾಡಿನ ಬೇಸಿಗೆಯಲ್ಲಿ ಮೊಹಮ್ಮದ್ ಸಿರಾಜ್ ಅವರು ಟೆಸ್ಟ್ ಸರಣಿಯುದ್ದಕ್ಕೂ ತೋರಿಸಿದ ದಿಟ್ಟ ಆಟವು ಮುಖ್ಯ ಕೋಚ್ ಗಂಭೀರ್ ನಿಲುವನ್ನು ಪುಷ್ಟೀಕರಿಸಿದೆ.

ಇಂಗ್ಲೆಂಡ್ನಲ್ಲಿ ಸೋಮವಾರ ಮುಕ್ತಾಯವಾದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2–2ರಿಂದ ಸಮಬಲ ಸಾಧಿಸಿರುವುದು ಗಂಭೀರ್ ಮತ್ತು ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಅವರ ಸ್ಥಾನಗಳನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಇವರಿಬ್ಬರ ‘ಜೊತೆಯಾಟ’ದಿಂದಾಗಿ ತಂಡದಲ್ಲಿ ‘ಸಮಾನ ಸಂಸ್ಕೃತಿ’ ನೆಲೆಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ತಂಡದಲ್ಲಿ ಕೆಲವು ಆಟಗಾರರಿಗೆ ಮಾತ್ರ ವಿಶೇಷವಾದ ಆದ್ಯತೆ ನೀಡುವುದನ್ನು ತಪ್ಪಿಸುವಲ್ಲಿ ಬಹುತೇಕ ಯಶಸ್ವಿಯಾಗಿ
ದ್ದಾರೆ. ಗಂಭೀರ್, ಆಯ್ಕೆಗಾರರು ಮತ್ತು ಬಿಸಿಸಿಐ ಅಧಿಕಾರಿಗಳೆಲ್ಲರೂ ಎಲ್ಲರನ್ನೂ ಸಮಾನವಾಗಿ ಒಳಗೊಳ್ಳುವ ಏಕ ಉದ್ದೇಶ ಹೊಂದಿರುವುದು ಈ ಸರಣಿಯಲ್ಲಿ ಮೇಲ್ನೋಟಕ್ಕೇ ಕಂಡುಬಂದಿದೆ.

ಇದರಿಂದಾಗಿ ಹುರುಪು ಗೊಂಡಿರುವ ವ್ಯವಸ್ಥಾಪನ ಮಂಡಳಿಯು ಮತ್ತೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಆಟಗಾರರು ತಾವು ಯಾವ ಪಂದ್ಯಗಳಲ್ಲಿ ಅಥವಾ ಸರಣಿಗಳಲ್ಲಿ ಆಡಬೇಕು ಎಂದು ನಿರ್ಧರಿಸುವ ಕಾರ್ಯಭಾರ ನಿರ್ವಹಣೆ ನಿಯಮವನ್ನು ಬದಲಾಯಿಸುವತ್ತ ಈಗ ದೃಷ್ಟಿ ನೆಟ್ಟಿದೆ.

‘ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರರಿಗೆ ಈ ಕುರಿತು ತಿಳಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ ಮೂರು ಮಾದರಿ
ಗಳಲ್ಲಿಯೂ ಆಡುವ ಕ್ರಿಕೆಟಿಗರಿಗೆ ಈ ವಿಚಾರ ತಿಳಿಸಲಾಗಿದೆ. ಆಟಗಾರರೇ ತಮಗೆ ಬೇಕಾದ ಪಂದ್ಯಗಳನ್ನು ಮಾತ್ರ ಆಡಲು ನಿರ್ಧರಿಸುವ ಪರಿಪಾಠಕ್ಕೆ ಕೊನೆ ಹಾಡಲು ತೀರ್ಮಾನಿಸಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಯೊಬ್ಬರು ತಿಳಿಸಿದರು.

‘ಆದರೆ ಕಾರ್ಯಭಾರ ನಿರ್ವಹಣೆ ನಿಯಮವನ್ನು ತೆಗೆದು ಹಾಕುವುದಿಲ್ಲ. ಅದರಲ್ಲೂ ವೇಗದ ಬೌಲರ್ಗಳ ಆಟದ ಪ್ರಮಾಣದ ನಿರ್ವಹಣೆ ಮಹತ್ವದ್ದು. ಆದರೆ ಅದಕ್ಕಾಗಿ ಕಾರ್ಯಭಾರ ಒತ್ತಡ ನಿರ್ವಹಣೆ ಎಂಬ ಪರಿಭಾಷೆ ಬಳಸುವುದು ಸೂಕ್ತವಲ್ಲ. ಇದರಿಂದಾಗಿ ಆಟಗಾರರು ಅತಿ ಮಹತ್ವದ ಪಂದ್ಯ ಗಳನ್ನು ತಪ್ಪಿಸಿಕೊಳ್ಳುವಂತಾಗುತ್ತದೆ’ ಎಂದೂ ಅವರು ವಿವರಿಸಿದರು.

ಭಾರತದ ಮೊಹಮ್ಮದ್ ಸಿರಾಜ್ ಅವರು ಈ ಸರಣಿಯ ಎಲ್ಲ ಪಂದ್ಯ
ಗಳಲ್ಲಿಯೂ ಆಡಿದರು. ಒಟ್ಟು 185.3 ಓವರ್ಗಳನ್ನು ಬೌಲಿಂಗ್ ಮಾಡಿದರು. ಇದರೊಂದಿಗೆ ಫೀಲ್ಡಿಂಗ್ ಹಾಗೂ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ ಅವಧಿಯನ್ನೂ ಪರಿಗಣಿಸಬೇಕು. ಅವರು ಕಳೆದ ಆರು ವಾರಗಳಲ್ಲಿ ಬೌಲಿಂಗ್ ಹೊಣೆ ನಿಭಾಯಿಸಿದ ರೀತಿ ಉತ್ತಮ ಉದಾ
ಹರಣೆಯಾಗಿದೆ. ಇದು ಅವರ ಅತ್ಯುತ್ತಮ ದೈಹಿಕ ಕ್ಷಮತೆಯನ್ನೂ ತೋರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿರಾಜ್, ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವರು ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಂಡದ ಪ್ರಮುಖ ಬೌಲರ್ ಗೈರುಹಾಜರಿಯಲ್ಲಿಯೂ
ತಂಡಕ್ಕೆ ಆಸರೆಯಾಗಿದ್ದಾರೆ.

ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಅವರು ಕೂಡ ತಮ್ಮ ಗಾಯದ ಸಮಸ್ಯೆಯ ನಡುವೆಯೂ ದೀರ್ಘ ಸ್ಪೆಲ್ಗಳಲ್ಲಿ ಬೌಲಿಂಗ್ ಮಾಡಿದರು. ಅವರು ಸತತ ನಾಲ್ಕು ಪಂದ್ಯಗಳಲ್ಲಿ ಆಡಿದ್ದರು. ಇದರಿಂದಾಗಿ ಕಾರ್ಯಭಾರ ನಿರ್ವಹಣೆ ನಿಯಮ ಕುರಿತು ಚರ್ಚೆ ಶುರುವಾಗಿತ್ತು. ಈ ನಿಯಮವು ಅತಿರಂಜಿತ ಪರಿಕಲ್ಪನೆ
ಯಾಗಿದ್ದು ತಮ್ಮ ಅನುಕೂಲಕ್ಕೆ ತಕ್ಕಂತೆ ಆಟಗಾರರು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾತುಗಳು ಕೇಳಿಬಂದಿದ್ದವು.

ವೇಗಿ ಜಸ್ಪ್ರೀತ್ ಬೂಮ್ರಾ ಅವರು ಐದು ಪಂದ್ಯಗಳಲ್ಲಿಯೂ ಆಡಲು ಸಾಧ್ಯವಾಗದಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಅವರ ಗಾಯದ ಸಮಸ್ಯೆಗೆ ಪೂರ್ಣ ಪರಿಹಾರ ನೀಡುವಲ್ಲಿ ಬೆಂಗಳೂರಿನ ಸೆಂಟರ್ ಆಫ್ ಎಕ್ಸ್ಲೆನ್ಸ್ (ಸಿಒಇ)ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೀಡಾ ವಿಜ್ಞಾನ ತಂಡದ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿವೆ.

ಬೂಮ್ರಾ ಅವರು ಮುಂದಿನ ಒಂದು ತಿಂಗಳು ವಿಶ್ರಾಂತಿ ಪಡೆದ ನಂತರ
ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಲಭ್ಯರಾಗುವ ಸಾಧ್ಯತೆ ಇದೆ. ಅದ ರಿಂದಾಗಿ ಅಕ್ಟೋಬರ್ 2ರಿಂದ ಆರಂಭ
ವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆಯ ಬಹುದು. ಅವರು ಗಾಯಗೊಳ್ಳದೇ ಇದ್ದರೆ, ನವೆಂಬರ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಎರಡು ಟೆಸ್ಟ್ಗಳಲ್ಲಿ ಆಡಬಹುದು ಎನ್ನಲಾಗಿದೆ.

‘ಕ್ರಿಕೆಟ್ ಪದಕೋಶದಿಂದ ‘ಕಾರ್ಯಭಾರ ಒತ್ತಡ’ ಕಿತ್ತುಹಾಕಿ’

‘ಭಾರತದ ಕ್ರಿಕೆಟ್ ಪದಕೋಶದಿಂದ ಕಾರ್ಯಭಾರ ಒತ್ತಡ ನಿರ್ವಹಣೆ ಎಂಬ ಪದಗಳು ಅಳಿಸಿಹೋಗಬೇಕು. ಇದನ್ನು ನಾನು ಬಹಳ ವರ್ಷಗಳಿಂದ ಹೇಳುತ್ತಿದ್ದಾರೆ. ಕಾರ್ಯಭಾರ ಎನ್ನುವುದು ನಮ್ಮ ಮನಸ್ಥಿತಿ ಯಷ್ಟೇ ಎಂಬುದನ್ನು ಅರಿಯಬೇಕು’ ಎಂದು ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಹೇಳಿದ್ದಾರೆ.

'ದೇಶಕ್ಕಾಗಿ ಆಡುವಾಗ ನೋವು, ಸಂಕಟಗಳನ್ನು ಮರೆತುಬಿಡಬೇಕು. ರಾಷ್ಟ್ರದ ಗಡಿಯಲ್ಲಿರುವ ಸೈನಿಕರು ವಿಪರೀತ ಚಳಿಯ ಬಗ್ಗೆ ಯಾವತ್ತಾದರೂ ದೂರಿದ್ದಾರೆಯೇ? ರಿಷಭ್ ಪಂತ್ ತೋರಿದ ಮಾದರಿ ಎಂತಹದು? ತಮ್ಮ ಮೂಳೆ ಮುರಿದಿದ್ದರೂ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದರು. ಎಲ್ಲ ಆಟಗಾರರಿಂದಲೂ ಇಂತಹ ನಿರೀಕ್ಷೆಯು ಅಪೇಕ್ಷಿತ. ಭಾರತಕ್ಕಾಗಿ ಕ್ರಿಕೆಟ್ ಆಡುವುದು ಗೌರವದ ಸಂಗತಿ’ ಎಂದು ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಆಟಗಾರರ ಕಾರ್ಯಭಾರ ಒತ್ತಡ ನಿರ್ವಹಣೆ ನಿಯಮ ಕುರಿತು ‘ಇಂಡಿಯಾ ಟುಡೆ’ ಸಂವಾದದಲ್ಲಿ ಭಾಗವಹಿಸಿದ್ದ ಅವರು, ‘140 ಕೋಟಿ ಜನಸಂಖ್ಯೆಯ ದೇಶವನ್ನು ನೀವು (ಆಟಗಾರರು) ಪ್ರತಿನಿಧಿಸುತ್ತಿದ್ದೀರಿ. ಮೊಹಮ್ಮದ್ ಸಿರಾಜ್ ಅವರು ಗಟ್ಟಿ ಗುಂಡಿಗೆಯ ಬೌಲರ್. ಅವರು ಇಡೀ ಸರಣಿಯಲ್ಲಿ ದಿಟ್ಟ ಬೌಲಿಂಗ್ ಮಾಡಿದರು. ಸತತ ಎಲ್ಲ ಪಂದ್ಯ ಗಳಲ್ಲಿಯೂ ಆಡುವುದರೊಂದಿಗೆ ಕಾರ್ಯಭಾರ ನಿಯಮ ಪೊಳ್ಳು ಎಂಬುದನ್ನು ತೋರಿಸಿಕೊಟ್ಟರು. 7–8 ಓವರ್ಗಳ ಸ್ಪೆಲ್ಗಳನ್ನು ಅವರು ಸತತವಾಗಿ ಮಾಡುತ್ತಲೇ ಇದ್ದರು. ನಾಯಕನಿಗೂ ಸಿರಾಜ್ ಮೇಲೆ ಹೆಚ್ಚು ವಿಶ್ವಾಸವಿತ್ತು ಮತ್ತು ದೇಶಕ್ಕೆ ಅವರಿಂದ ಅಪಾರ ನಿರೀಕ್ಷೆ ಇತ್ತು’ ಎಂದರು.

ನಾವು ಒಂದಿಷ್ಟು ಗೆಲ್ಲಬಹುದು, ಮತ್ತೊಂದಿಷ್ಟು ಸೋಲಬಹುದು. ಆದರೆ, ನಾವೆಂದೂ ಶರಣಾಗತರಾಗುವುದಿಲ್ಲ! ಅಮೋಘವಾಗಿ ಆಡಿದ್ದೀರಿ ಹುಡುಗರೇ..
ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.