ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಎರಡು ಶತಕ: ಬಟ್ಲರ್‌, ರೂಟ್ ರೋಚಕ ಪ್ರದರ್ಶನ

ಮಂಗಳವಾರ, ಜೂನ್ 25, 2019
25 °C
ಇಂಗ್ಲೆಂಡ್‌–ಪಾಕಿಸ್ತಾನ

ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಎರಡು ಶತಕ: ಬಟ್ಲರ್‌, ರೂಟ್ ರೋಚಕ ಪ್ರದರ್ಶನ

Published:
Updated:

ನಾಟಿಂಗಂ: ಇಲ್ಲಿನ ಟ್ರೆಂಟ್‌ಬ್ರಿಜ್‌ನಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಜೋ ರೂಟ್‌ ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ 2019ರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಶತಕ ಪೂರೈಸಿದ ಹೆಗ್ಗಳಿಕೆ ಪಡೆದಿದ್ದಾರೆ. 

ಪಾಕಿಸ್ತಾನ ನೀಡಿದ 349ರನ್‌ ಗೆಲುವಿನ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ ತಂಡಕ್ಕೆ ಆಸರೆಯಾಗಿ ನಿಂತ ರೂಟ್‌ 100 ರನ್‌ ಪೂರೈಸಿದ್ದು, ತಂಡದ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದರು. ಇದೇ ಹೋರಾಟದಲ್ಲಿ ರೂಟ್‌ಗೆ ಜತೆಯಾದ ಜೋಸ್‌ ಬಟ್ಲರ್ ಟೂರ್ನಿಯ ಎರಡನೇ ಶತಕ ‍ಪೂರೈಸಿದರು. 

ರೂಟ್‌ 104 ಎಸತೆಗಳಲ್ಲಿ 107 ರನ್‌ ಗಳಿಸಿದರು. ಶತಕವು 10 ಬೌಂಡರಿ ಹಾಗೂ ಒಂದು ಸಿಕ್ಸರ್‌ ಒಳಗೊಂಡಿದೆ. 38ನೇ ಓವರ್‌ನಲ್ಲಿ ಶದಾಬ್‌ ಖಾನ್‌ ಎಸೆತದಲ್ಲಿ ರೂಟ್‌ ಆಟ ಅಂತ್ಯಗೊಳಿಸಿದರು.

ಕ್ಷಣಕ್ಷಣದ ಸ್ಕೋರ್‌: https://bit.ly/2QFwVtL

ಭರ್ಜರಿ ಬ್ಯಾಟಿಂಗ್‌ ‍ಪ್ರದರ್ಶನ ತೋರಿದ ಜೋಸ್‌ ಬಟ್ಲರ್‌, 75 ಎಸೆತಗಳಲ್ಲಿ ಶತಕ ಗಳಿಸಿ ಸಂಭ್ರಮಿಸಿದರು. ಎರಡು ಸಿಕ್ಸರ್‌ ಹಾಗೂ 9 ಬೌಂಡರಿ ಒಳಗೊಂಡಂತೆ 103 ರನ್‌ ಗಳಿಸಿದ್ದಾರೆ. ಒಂದೇ ಪಂದ್ಯದಲ್ಲಿ ಎರಡು ಶತಕ ಸಾಧನೆ ದಾಖಲಾಗಿರುವುದು ಈ ಟೂರ್ನಿಯ ವಿಶೇಷಗಳಲ್ಲೊಂದು.

ಇದನ್ನೂ ಓದಿ: ಬ್ಯಾಟ್ಸ್‌ಮನ್‌ಗಳ ಆರ್ಭಟ: ಇಂಗ್ಲೆಂಡ್‌ ಗೆಲುವಿಗೆ 349ರನ್‌ ಗುರಿ ನೀಡಿದ ಪಾಕ್‌

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !