ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಣಗಳ ಹಿಡಿತದ ಎದುರು ನಡೆಯದ ಸಿಂಹಳೀಯರ ಆಟ; ಲಂಕಾಗೆ ಸೋಲು

ವಿಶ್ವಕಪ್‌ ಕ್ರಿಕೆಟ್‌
Last Updated 28 ಜೂನ್ 2019, 16:40 IST
ಅಕ್ಷರ ಗಾತ್ರ

ಚೆಸ್ಟರ್‌ ಲಿ ಸ್ಟ್ರೀಟ್, ಇಂಗ್ಲೆಂಡ್:ಸೆಮಿಫೈನಲ್ ಪ್ರವೇಶಿಸುವ ಕೊನೆಯ ಅವಕಾಶದಲ್ಲಿ ಶ್ರೀಲಂಕಾ ತಂಡ ಎಡವಿದೆ. ಹಿಂದಿನ ಪಂದ್ಯ ಗೆದ್ದು ಹುಮ್ಮಸ್ಸಿನಲ್ಲಿದ್ದ ಸಿಂಹಳೀಯರು ಹರಿಣಗಳ ಬೌಲಿಂಗ್‌ ಪಟ್ಟಿನೆದುರು ಮಂಕಾಗಿ ಹೋದರು.

ಆರಂಭದಿಂದಲೂ ಆಘಾತ ಅನುಭವಿಸುತ್ತಲೇ ಬಂದ ಶ್ರೀಲಂಕಾ ಚೇತರಿಸಿಕೊಳ್ಳಲೇ ಇಲ್ಲ. ದಕ್ಷಿಣ ಆಫ್ರಿಕಾ ಗೆಲುವಿಗೆ 204 ರನ್‌ ಗುರಿ ನೀಡಿದರು. ಕೇವಲ 1 ವಿಕೆಟ್‌ ಕಳೆದುಕೊಂಡು ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸಿತು.

ನಾಯಕ ಫಾಫ್ ಡು ಪ್ಲೆಸಿ ಮತ್ತು ಹಾಶೀಂ ಆಮ್ಲಾ ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಆಫ್ರಿಕಾ ತಂಡ ಸುಲಭವಾಗಿ ಜಯ ದಾಖಲಿಸಿತು.ಫಾಫ್ ಡು ಪ್ಲೆಸಿ 96 ರನ್ ಹಾಗೂಹಾಶೀಂ ಆಮ್ಲಾ80ರನ್‌ ಗಳಿಸಿ ಔಟಾಗದೇ ಉಳಿದರು.

ಕ್ಷಣಕ್ಷಣದ ಸ್ಕೋರ್‌:https://bit.ly/2KLtB03

ಶ್ರೀಲಂಕಾ ನಿಗದಿತ 49.3ಓವರ್‌ಗಳಲ್ಲಿ ಎಲ್ಲವಿಕೆಟ್‌ ಕಳೆದುಕೊಂಡು203ರನ್‌ ಗಳಿಸಿತು.

ರಿವರ್‌ಸೈಡ್‌ ಕ್ರೀಡಾಂಗಣದಲ್ಲಿಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಪಂದ್ಯದಮೊದಲ ಎಸೆತದಲ್ಲಿಯೇ ಕಗಿಸೊ ರಬಾಡಲಂಕಾ ನಾಯಕದಿಮುತ ಕರುಣಾರತ್ನೆ ವಿಕೆಟ್‌ ಪಡೆದು ಭರ್ಜರಿ ಆರಂಭ ಮಾಡಿದರು. ಹಿಂದಿನ ಬಹುತೇಕ ಪಂದ್ಯಗಳಲ್ಲಿ ತಂಡದ ರನ್‌ ಗಳಿಕೆಯಲ್ಲಿ ಆಸರೆಯಾಗಿದ್ದಕರುಣಾರತ್ನೆ ವಿಕೆಟ್‌ ಕಳೆದುಕೊಂಡಲಂಕನ್ನರು ಒತ್ತಡಕ್ಕೆ ಸಿಲುಕಿದರು.

ಕುಶಾಲ ಪೆರೆರಾಮತ್ತುಅವಿಷ್ಕಾ ಫರ್ನಾಂಡೊ(30) ರನ್ ಗಳಿಕೆಗೆಭದ್ರ ಬುನಾದಿ ಹಾಕುವ ಪ್ರಯತ್ನ ನಡೆಸಿದರು. ಬಿರುಸಿನ ಆಟವಾಡುತ್ತಿದ್ದ ಫರ್ನಾಂಡೊ, ಡ್ವೇನ್ ಪ್ರಿಟೊರಿಯೊ ಎಸೆತದಲ್ಲಿಭಾರೀ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ನೀಡಿ ಹೊರ ನಡೆದರು. ದೊಡ್ಡ ಮೊತ್ತದ ಸ್ಕೋರ್‌ ದಾಖಲಾಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಬೇಸರದಲ್ಲಿ ನಿಶ್ಯಬ್ದರಾದರು. ಲಂಕಾ ಪರ ಯಾವುದೇ ಆಟಗಾರ ಅರ್ಧ ಶತಕವನ್ನೂ ದಾಖಲಿಸಲಿಲ್ಲ. ಜೀವನ್‌ ಮೆಂಡಿಸ್‌ 1 ಸಿಕ್ಸರ್‌ ಸಿಡಿಸಿದ್ದು ಬಿಟ್ಟರೆ, ಸ್ಫೋಟಕ ಬ್ಯಾಟಿಂಗ್‌ ಸಹ ಕಂಡು ಬರಲಿಲ್ಲ.

ಕ್ಷಣಕ್ಷಣದ ಸ್ಕೋರ್‌:https://bit.ly/2KLtB03

ಅವಿಷ್ಕಾ ಹೊರನಡೆದ ಅಲ್ಪ ಸಮಯದಲ್ಲಿ ಡ್ವೇನ್‌ ಎಸೆತದಲ್ಲಿಯೇಕುಶಾಲ ಪೆರೆರಾ(30) ಸಹ ವಿಕೆಟ್‌ ಕಳೆದುಕೊಂಡರು. ಆರಂಭದ ಆಘಾತದ ಅನುಭವಿಸಿದರೂಉತ್ತಮ ರನ್‌ ರೇಟ್‌ನೊಂದಿಗೆ ಆಡುತ್ತಿದ್ದ ಲಂಕಾದ ಎರಡನೇ ವಿಕೆಟ್‌ ಉರುಳುತ್ತಿದ್ದಂತೆ ರನ್‌ ಹರಿವುಕುಸಿಯತೊಡಗಿತು. ದಕ್ಷಿಣ ಆಫ್ರಿಕಾದ ಕ್ರಿಸ್‌ ಮಾರಿಸ್‌ ಮತ್ತುಡ್ವೇನ್ ಪ್ರಿಟೊರಿಯೊ, ಲಂಕಾದ ಮಧ್ಯಮ ಕ್ರಮಾಂಕ ಆರ್ಭಟಿಸಿದಂತೆ ತಡೆಯುವ ಜತೆಗೆ ಬ್ಯಾಟ್ಸ್‌ಮನ್‌ಗಳು ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ.

ಆಕ್ರಮಣಕಾರಿ ಬೌಲಿಂಗ್‌ ಮಾಡಿದಡ್ವೇನ್ ಪ್ರಿಟೊರಿಯೊ ಮತ್ತು ಕ್ರಿಸ್‌ ಮಾರಿಸ್‌ ತಲಾ 3 ವಿಕೆಟ್‌ ಕಬಳಿಸಿದರೆ,ಕಗಿಸೊ ರಬಾಡ 2 ವಿಕೆಟ್‌ ಹಾಗೂಆ್ಯಂಡಿಲೆ ಪಿಶುವಾಯೊ ಮತ್ತುಜೆ.ಪಿ.ಡುಮಿನಿತಲಾ 1 ವಿಕೆಟ್‌ ಪಡೆದರು.

ತಾಳ್ಮೆಯ ಆಟ ಪ್ರದರ್ಶಿಸಿದಕುಶಾಲ ಮೆಂಡಿಸ್(23), ಧನಂಜಯ ಡಿಸಿಲ್ವಾ(24),ಏಂಜೆಲೊ ಮ್ಯಾಥ್ಯೂಸ್‌(11), ಜೀವನ್‌ ಮೆಂಡಿಸ್‌(18),ಇಸುರು ಉಡಾನ(17), ತಿಸಾರ ಪೆರೆರಾ(25)ಕಾಣಿಕೆಯಿಂದಾಗಿ ತಂಡ 200 ರನ್ ಗಡಿದಾಟಿತು.

ಕಳೆದ ಪಂದ್ಯದಲ್ಲಿ ಶ್ರೀಲಂಕಾ ಬಲಿಷ್ಠ ಇಂಗ್ಲೆಂಡ್ ತಂಡವನ್ನೇ ಮಣಿಸಿತ್ತು. ಅನುಭವಿ ವೇಗಿ ಲಸಿತ್ ಮಾಲಿಂಗ ಅವರು ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದರು. ಆ ಪಂದ್ಯದಲ್ಲಿ ಲಂಕಾ ತಂಡವು 232 ರನ್‌ಗಳ ಸಾಧಾರಣ ಮೊತ್ತದ ಗುರಿಯನ್ನು ನೀಡಿತ್ತು. ಇಂಗ್ಲೆಂಡ್ ತಂಡವನ್ನು 212 ರನ್‌ಗಳಿಗೆ ಕಟ್ಟಿಹಾಕಿತ್ತು. ಸ್ಪಿನ್ನರ್‌ ಧನಂಜಯ ಡಿಸಿಲ್ವಾ ಕೂಡ ಮೂರು ವಿಕೆಟ್ ಪಡೆದು ಮಹತ್ವದ ಕಾಣಿಕೆ ನೀಡಿದ್ದರು. ಅದೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಫರ್ನಾಂಡೊ, ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್ ಅವರು ಲಯಕ್ಕೆ ಮರಳಿದ್ದರು.

ಈ ಪಂದ್ಯದಲ್ಲಿ ಲಂಕಾ ತಂಡವು ಗೆದ್ದರೆ ಸೆಮಿಫೈನಲ್‌ಗೆ ಸಾಗುವ ಅವಕಾಶ ಮತ್ತಷ್ಟು ಹೆಚ್ಚಲಿದೆ. ಸೋತರೆ, ಟೂರ್ನಿಯಿಂದ ಹೊರಬಿದ್ದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಜೊತೆಗೂಡಲಿದೆ!

ತಂಡಗಳು

ಶ್ರೀಲಂಕಾ:ದಿಮುತ ಕರುಣಾರತ್ನೆ (ನಾಯಕ), ಧನಂಜಯ ಡಿಸಿಲ್ವಾ, ಅವಿಷ್ಕಾ ಫರ್ನಾಂಡೊ, ಸುರಂಗಾ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ ಮೆಂಡಿಸ್, ಜೀವನ್ ಮೆಂಡಿಸ್, ಕುಶಾಲ ಪೆರೆರಾ, ತಿಸಾರ ಪೆರೆರಾ, ನುವಾನ ಪ್ರದೀಪ್, ಮಿಲಿಂದಾ ಸಿರಿವರ್ಧನೆ, ಲಾಹಿರು ತಿರಿಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ.

ದಕ್ಷಿಣ ಆಫ್ರಿಕಾ:ಫಾಫ್ ಡು ಪ್ಲೆಸಿ (ನಾಯಕ), ಹಾಶೀಂ ಆಮ್ಲಾ, ಕ್ವಿಂಟನ್ ಡಿಕಾಕ್, ಜೆಪಿ ಡುಮಿನಿ, ಬೆರನ್ ಹೆನ್ರಿಕ್ಸ್, ಏಡನ್ ಮರ್ಕರಮ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಲುಂಗಿ ಗಿಡಿ, ಆ್ಯಂಡಿಲೆ ಪಿಶುವಾಯೊ, ಡ್ವೇನ್ ಪ್ರಿಟೊರಿಯೊ, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ಇಮ್ರಾನ್ ತಾಹೀರ್, ರಸ್ಸಿ ವ್ಯಾನ್ ಡರ್ ಡಸೆನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT