ಭಾನುವಾರ, ಸೆಪ್ಟೆಂಬರ್ 15, 2019
27 °C
ವಿಶ್ವಕಪ್‌ ಕ್ರಿಕೆಟ್‌

ಮಹೇಲ ಜಯವರ್ಧನೆಯ 12 ವರ್ಷ ಹಿಂದಿನ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್

Published:
Updated:

ಲಂಡನ್‌: ಭಾನುವಾರ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡದ ಎದುರು ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕಿವೀಸ್ ಪಡೆಯ ನಾಯಕ ಕೇನ್‌ ವಿಲಿಯಮ್ಸನ್‌ ಹೊಸ ದಾಖಲೆ ನಿರ್ಮಿಸಿದರು. 

ಟೂರ್ನಿಯ ಬಹುತೇಕ ಎಲ್ಲ ಪಂದ್ಯಗಳಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ನೆರವಾದವರು ಕೇನ್‌ ವಿಲಿಯಮ್ಸನ್‌. ಇಂದು ಇಂಗ್ಲೆಂಡ್‌ ಎದುರು 30 ರನ್‌ ಗಳಿಸಿದ ಅವರು ನಾಯಕನಾಗಿ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ದಾಖಲೆ ಮಾಡಿದರು. 

ಇದನ್ನೂ ಓದಿ: ಫೈನಲ್‌: ಕಿವೀಸ್‌ ಪಡೆಗೆ ವೋಕ್ಸ್‌, ಪ್ಲಂಕೆಟ್‌ ಕಾಟ; ಇಂಗ್ಲೆಂಡ್‌ಗೆ ಗುರಿ @ 242

ಮೂರನೇ ಕ್ರಮಾಂಕದಲ್ಲಿ ಆಡುವ ವಿಲಿಯಮ್ಸನ್‌ ವಿಶ್ವಕಪ್‌ನ 9 ಇನಿಂಗ್ಸ್‌ಗಳಲ್ಲಿ 578 ರನ್‌ ಗಳಿಸುವ ಮೂಲಕ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನ(548) ಅವರ ದಾಖಲೆಯನ್ನು ಹಿಂದಿಟ್ಟರು. ಜಯವರ್ಧನೆ ಅವರಿಗಿಂತ ಮೂರು ಇನಿಂಗ್‌ ಕಡಿಮೆ ಆಟದಲ್ಲಿಯೇ ವಿಲಿಯಮ್ಸನ್‌ ದಾಖಲೆಯ ರನ್‌(548) ಪೇರಿಸಿದರು. 

ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್‌ ಗಳಿಸಿರುವ ನಾಯಕರ ಪೈಕಿ ವಿಲಿಯಮ್ಸನ್‌ ನಾಲ್ಕನೆಯವರು. ನ್ಯೂಜಿಲೆಂಡ್‌ ಆಟಗಾರರ ಪೈಕಿ ರಾಸ್‌ ಟೇಲರ್‌ ಹೊರತುಪಡಿಸಿದರೆ ವಿಶ್ವಕಪ್‌ನ ಒಂದೇ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್‌. 

ಕ್ಷಣಕ್ಷಣದ ಸ್ಕೋರ್‌: https://bit.ly/2JJUFtu

ವಿಶ್ವಕಪ್‌ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಅಧಿಕ ರನ್‌ ಗಳಿಸಿದ ನಾಯಕರು

* ಕೇನ್‌ ವಿಲಿಯಮ್ಸನ್‌–2019– ನ್ಯೂಜಿಲೆಂಡ್‌– 578 ರನ್‌– 9 ಇನಿಂಗ್ಸ್‌– 2 ಶತಕ
* ಮಹೇಲ ಜಯವರ್ಧನೆ–2007– ಶ್ರೀಲಂಕಾ– 548 ರನ್‌– 11 ಇನಿಂಗ್ಸ್‌– 1 ಶತಕ
* ರಿಕಿ ಪಾಂಟಿಂಗ್‌– ಆಸ್ಟ್ರೇಲಿಯಾ–2007–539 ರನ್‌– 9 ಇನಿಂಗ್ಸ್– 1 ಶತಕ
* ಆ್ಯರನ್‌ ಫಿಂಚ್‌– ಆಸ್ಟ್ರೇಲಿಯಾ–2019– 507 ರನ್‌– 10 ಇನಿಂಗ್ಸ್‌– 2 ಶತಕ 

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ 2019: ಕೇನ್‌ ವಿಲಿಯಮ್ಸನ್‌ ಸಾಧನೆ

* ಪಂದ್ಯ– 10 (9 ಇನಿಂಗ್ಸ್‌)

* ಒಟ್ಟು ರನ್‌– 578

* ರನ್‌ ಸರಾಸರಿ– 82.57 (ಟೂರ್ನಿಯಲ್ಲಿ 2ನೇ ಸ್ಥಾನ)

* ಗರಿಷ್ಠ ಸ್ಕೋರ್– 148

* ಸ್ಟ್ರೈಕ್‌ ರೇಟ್‌– 74.96

* ಗಳಿಸಿದ ವಿಕೆಟ್‌– 2

Post Comments (+)