ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಶಸ್ವಿ ಜೈಸ್ವಾಲ್ ಹೊಸ ಕೇಶವಿನ್ಯಾಸ: ಶಾಲಾ ಬಾಲಕನಂತಿದೆ ಎಂದ ನೆಟ್ಟಿಗರು

Published 4 ಜುಲೈ 2024, 12:48 IST
Last Updated 4 ಜುಲೈ 2024, 12:48 IST
ಅಕ್ಷರ ಗಾತ್ರ

ನವದೆಹಲಿ: ಚಂಡಮಾರುತದಿಂದಾಗಿ ಬಾರ್ಬಡೋಸ್‌ದಲ್ಲೇ ಉಳಿದಿದ್ದ ಭಾರತ ತಂಡದ ಆಟಗಾರರು ಇಂದು ಬೆಳಿಗ್ಗೆ ಬ್ರಿಜ್‌ಟೌನ್‌ನಿಂದ ದೆಹಲಿಗೆ ಬಂದಿಳಿದ್ದಾರೆ.

ದೆಹಲಿಗೆ ಬಂದಿಳಿಯುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಆಟಗಾರರು, ಪ್ರಧಾನಿ ಅವರ ನಿವಾಸದಲ್ಲಿ ಸುಮಾರು ಎರಡು ಗಂಟೆ ಸಮಯ ಕಳೆದಿದ್ದಾರೆ.

ಈ ನಡುವೆಯೇ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಕೇಶ ವಿನ್ಯಾಸ ಎಲ್ಲರ ಗಮನ ಸೆಳೆದಿದ್ದು, ಈ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮೀಮ್ಸ್‌ಗಳು ಹರಿದಾಡಿವೆ.

ಶಾಲಾ ದಿನಗಳಲ್ಲಿ ತಲೆ ಬಾಚಿಕೊಳ್ಳುವಂತೆ ಯಶಸ್ವಿ ಜೈಸ್ವಾಲ್‌ ಅವರ ಹೇರ್‌ ಸ್ಟೈಲ್ ಕಾಣಿಸುತ್ತಿದದ್ದೆ ಮೀಮರ್‌ಗಳ ಬಾಯಿಗೆ ಆಹಾರವಾಗಲು ಕಾರಣವಾಗಿದೆ.

ಯಶಸ್ವಿ ಜೈಸ್ವಾಲ್ ಅವರ ಹೇರ್ ಸ್ಟೈಲ್‌ ಫೋಟೊವನ್ನು ಇತರ ಫೋಟೊಗಳೊಂದಿಗೆ ಹಂಚಿಕೊಂಡಿರುವ ನೆಟ್ಟಿಗರು, ಜೈಸ್ವಾಲ್ ಅವರ ಕಾಲೆಳೆದಿದ್ದಾರೆ.

ಹಲವಾರು ಬಳಕೆದಾರರು ಜೈಸ್ವಾಲ್ ಹೇರ್‌ ಸ್ಟೈಲ್‌ ಬಗ್ಗೆ ಕಾಮೆಂಟಿಸಿದ್ದು, ಶಾಲಾ ಹುಡುಗನ ರೀತಿ ಕಾಣುತ್ತಿದ್ದಾರೆ ಎಂದಿದ್ದಾರೆ.

‘ಹಾರ್ದಿಕ್ ಪಾಂಡ್ಯಗೆ ತೀವ್ರ ಪೈಪೋಟಿ’ ಎಂದು ಟ್ವಿಟ್ಟಿಗರೊಬ್ಬರು ಹಾರ್ದಿಕ್ ಪಾಂಡ್ಯ ಮತ್ತು ಜೈಸ್ವಾಲ್ ಅವರ ಫೋಟೊ ಹಂಚಿಕೊಂಡು ಇಬ್ಬರ ಕಾಲೆಳೆದಿದ್ದಾರೆ.

ಬಾರ್ಬಡೋಸಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ರೋಚಕ ಜಯ ಗಳಿಸುವ ಮೂಲಕ ಭಾರತ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಿಸಿಸಿಐ ₹125 ಕೋಟಿ ಬಹುಮಾನ ಘೋಷಿಸಿದೆ.

ಇದೀಗ ಮುಂಬೈನ ವಾಂಖೆಡೆ ಮೈದಾನದಲ್ಲಿ ವಿಜಯೋತ್ಸವ ನಡೆಯುತ್ತಿದ್ದು, ಆಟಗಾರರು ತೆರೆದ ಬಸ್‌ನಲ್ಲಿ ನರಿಮನ್ ಪಾಯಿಂಟ್‌ನಿಂದ ವಾಂಖೆಡೆ ಮೈದಾನದವರೆಗೆ ಸಂಚರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT