ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ರೋಹಿತ್ ಶರ್ಮಾರನ್ನು ತಂಡದಿಂದ ಕೈಬಿಡಬೇಕೇ? ಉತ್ತರ ಕೊಟ್ಟ ವಿರಾಟ್

Last Updated 25 ಅಕ್ಟೋಬರ್ 2021, 10:32 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಎದುರಾದ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸುದ್ದಿಗೋಷ್ಠಿಯಲ್ಲಿ ವಿಚಿತ್ರ ಪ್ರಶ್ನೆಯೊಂದು ಎದುರಾಗಿತ್ತು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿರುವ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ‌ಗಿಂತ ಯುವ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರೇ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ಇದರಿಂದ ಆಶ್ಚರ್ಯಚಕಿತರಾದ ವಿರಾಟ್, ಅದೇ ಧಾಟಿಯಲ್ಲಿ ಉತ್ತರಿಸಿದರು. 'ಇದು ತುಂಬಾ ಧೈರ್ಯಶಾಲಿ ಪ್ರಶ್ನೆ, ನಿಮ್ಮ ಅನಿಸಿಕೆ ಏನು ಸರ್? ನಾನು ಉತ್ತಮ ಎನಿಸಿದ ತಂಡದೊಂದಿಗೆ ಕಣಕ್ಕಿಳಿದಿದ್ದೇನೆ. ನಿಮ್ಮ ಅಭಿಪ್ರಾಯವೇನು?' ಎಂದು ಕೇಳಿದರು.

'ನಾನು ನಿಮ್ಮನ್ನು ಕೇಳುತ್ತಿದ್ದೇನೆ? ನೀವು ರೋಹಿತ್ ಶರ್ಮಾ ಅವರನ್ನು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಕೈಬಿಡುತ್ತೀರಾ ? ನೀವು ರೋಹಿತ್ ಅವರನ್ನು ಕೈಬಿಡುತ್ತೀರಾ?' ಎಂದು ಆಶ್ಚರ್ಯಚಕಿತರಾಗಿ ಪ್ರಶ್ನಿಸಿದರು.

'ನಾವು ಆಡಿದ ಕೊನೆಯ ಪಂದ್ಯದಲ್ಲಿ ರೋಹಿತ್ ಕಾಣಿಕೆ ಏನೆಂಬುದು ನಿಮಗೆ ಗೊತ್ತಿಲ್ಲವೇ? ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ, ಹಾಗೇನೇನಾದರೂ ವಿವಾದ ಸೃಷ್ಟಿಸುವ ಉದ್ದೇಶವಿದ್ದರೆ ಮೊದಲೇ ಹೇಳಿಬಿಡಿ. ಅದಕ್ಕೆ ತಕ್ಕಂತೆ ಉತ್ತರಿಸುತ್ತೇನೆ' ಎಂದು ಕೊಹ್ಲಿ ಸಿಡಿಮಿಡಿಗೊಂಡರು.

ರೋಹಿತ್ ಅವರನ್ನು ಕೈಬಿಡಬೇಕೇ ಎಂದು ಕೇಳಿದಾಗ ತಲೆಗೆ ಕೈಯಿಟ್ಟು ವಿರಾಟ್ ತೋರಿರುವ ಹಾವಭಾವವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಸೋಲಿಗೆ ಶರಣಾಗಿದೆ. ಅಂದ ಹಾಗೆ ವಿಶ್ವಕಪ್ ಬಳಿಕ ಟಿ20 ನಾಯಕ ಸ್ಥಾನ ತೊರೆಯಲಿರುವುದರಿಂದ ಕೊಹ್ಲಿ ಸ್ಥಾನಕ್ಕೆ ರೋಹಿತ್ ಶರ್ಮಾ ಆಯ್ಕೆಯಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT