ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಲಿಸುವುದಿದ್ದರೆ ಬಾಬರ್‌ಗೆ ಹೋಲಿಸಿ, ಕೊಹ್ಲಿಗಲ್ಲ ಎಂದ ಪಾಕ್ ಯುವ ಬ್ಯಾಟ್ಸ್‌ಮನ್

Last Updated 25 ಮಾರ್ಚ್ 2020, 8:04 IST
ಅಕ್ಷರ ಗಾತ್ರ

ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ಭರವಸೆಯ ಬ್ಯಾಟ್ಸ್‌ಮನ್‌ ಎನಿಸಿದ್ದ ಹೈದರ್ ಅಲಿ, ಈ ಬಾರಿ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಅವರನ್ನು ಆ ದೇಶದ ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿರುವ ಬಾಬರ್‌ ಅಜಂ ಹಾಗೂ ಭಾರತದ ವಿರಾಟ್‌ ಕೊಹ್ಲಿ ಅವರಿಗೆ ಹೋಲಿಸಲಾಗುತ್ತಿದೆ.

25 ವಯಸ್ಸಿನ ಬಾಬರ್‌ ಹಾಗೂ ಕೊಹ್ಲಿ ಇಬ್ಬರೂ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಉತ್ತಮ ಆಟವಾಡುತ್ತಿದ್ದಾರೆ. ಹೈದರ್‌ ಬ್ಯಾಟಿಂಗ್‌ ಶೈಲಿಯನ್ನು ಗಮನಿಸಿರುವ ಕ್ರಿಕೆಟ್‌ ಪಂಡಿತರು ಹೈದರ್ ಕೂಡ ಕೊಹ್ಲಿ ಮತ್ತು ಬಾಬರ್‌ ಹಾದಿಯಲ್ಲಿ ಸಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಆದರೆ ಈಬಗ್ಗೆ ಮಾತನಾಡಿರುವ ಹೈದರ್‌, ‘ಒಬ್ಬ ಬ್ಯಾಟ್ಸ್‌ಮನ್‌ ತನ್ನ ರೋಲ್‌ ಮಾಡೆಲ್‌ಗಳಂತೆ ಆಗಲು ಸಾಧ್ಯವೇ ಇಲ್ಲ. ಆದರೆ, ಅವರಂತೆಯೇ ಬ್ಯಾಟಿಂಗ್‌ ಮಾಡುವುದನ್ನು ಕಲಿಯಬಹುದು. ಆ ಮೂಲಕ ತನ್ನನ್ನು ತಾನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಬಹುದು. ನಾನು ನನ್ನ ಆಟವನ್ನು ಬಾಬರ್‌ ಅಜಂ ಅವರಂತೆ ಮೇಲ್ದರ್ಜೆಗೇರಿಸಿಕೊಳ್ಳಲು ಬಯಸುತ್ತೇನೆಯೇ ವಿನಃ ವಿರಾಟ್‌ ಕೊಹ್ಲಿಯಂತಲ್ಲ. ಏಕೆಂದರೆ, ಕೊಹ್ಲಿಗಿಂತ ಉತ್ತಮ ಹೊಡೆಗಳನ್ನು ಬಾಬರ್‌ ಪ್ರಯೋಗಿಸಬಲ್ಲರು’ ಎಂದು ಹೇಳಿದ್ದಾರೆ.

ಆದಾಗ್ಯೂ ಕೊಹ್ಲಿ ಅವರಿಂದಲೂ ಕಲಿಯಲು ಬಯಸುವುದಾಗಿ ಹೇಳಿರುವ ಆತ, ‘ನಾನು ಕೊಹ್ಲಿಯಾಗಲು ಸಾಧ್ಯವಿಲ್ಲ. ಆದರೆ, ನಿರಂತರ ಆಭ್ಯಾಸ ಮಾಡುವ ಮೂಲಕ ಅವರಂತೆ ಹೊಡೆಗಳನ್ನು ಪ್ರಯೋಗಿಸುವುದನ್ನು ಕಲಿಯಬಲ್ಲೆ. ನಾನು ಹೈದರ್‌ ಅಲಿ. ಹಾಗಾಗಿ ನಾನು ಹೈದರ್‌ ಅಲಿಯಾಗಿಯಷ್ಟೇ ಉಳಿಯಲು ಸಾಧ್ಯ‘ ಎಂದಿದ್ದಾರೆ.

ನಾನು ಬಾಬರ್ ಅವರನ್ನು ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಮೆಂಟ್‌ ವೇಳೆ ಭೇಟಿ ಮಾಡಿದ್ದಾಗ, ಬ್ಯಾಟಿಂಗ್‌ಗೆ ಸಂಬಂಧಿಸಿಂತೆ ಸಲಹೆಗಳನ್ನು ಪಡೆದುಕೊಂಡಿದ್ದೆ. ಲಾಹೋರ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾಗಲೂ ಅವರಿಂದ ಸಾಕಷ್ಟನ್ನು ಕಲಿತಿದ್ದೇವೆ. ಪಿಎಸ್‌ಎಲ್‌ ಟೂರ್ನಿಯಲ್ಲಿ ಆಡುವಾಗಲೂ ಅವರು ನನ್ನನ್ನು ಬೆಂಬಲಿಸಿದ್ದಾರೆ. ಅದು ನನ್ನಲ್ಲಿನ ವಿಶ್ವಾಸವನ್ನು ಹೆ್ಚ್ಚಿಸಿದೆ. ಉಳಿದದ್ದೆಲ್ಲವೂ ದೇವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

ಇತ್ತೀಚೆಗೆ ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿದ್ದ ಪಾಕಿಸ್ತಾನದ ಮಾಜಿ ನಾಯಕ ರಮೀಜ್‌ ರಾಜಾ, ಭಾರತದ ವಿರಾಟ್ ಕೊಹ್ಲಿ ಮತ್ತು ಬಾಬರ್‌ ಅಜಂ ಅವರಂತೆ ಯವ ಆಟಗಾರ ಹೈದರ್‌ ಅಲಿ ಕೂಡ ಅಸಾಧಾರಣ ಪ್ರತಿಭೆ ಎಂದು ಬಣ್ಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT