ಸೋಮವಾರ, ಜೂನ್ 14, 2021
27 °C

ಅಬುದಾಭಿ ಟಿ10 ಟೂರ್ನಿಯಲ್ಲಿ ಆಡಲಿರುವ ಯುವಿ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಅಬುದಾಭಿಯಲ್ಲಿ ನಡೆಯಲಿರುವ ಟೆನ್–10 ಟೂರ್ನಿಯಲ್ಲಿ ಮರಾಠಾ ಅರೇಬಿಯನ್ಸ್‌ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ನವೆಂಬರ್‌ 14ರಿಂದ ಟೂರ್ನಿ ಆಯೋಜಿಸಲು ಐಸಿಸಿಯು ಅನುಮತಿ ನೀಡಿದೆ. ಈ ತಂಡದಲ್ಲಿ ಅವರು ಐಕಾನ್ ಆಟಗಾರನಾಗಿ ಯುವಿ ಸೇರ್ಪಡೆಯಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಯುವಿ ಆಡುತ್ತಿರುವ ಎರಡನೇ ವೃತ್ತಿಪರ ಲೀಗ್ ಟೂರ್ನಿ ಇದಾಗಿದೆ. ಅರೇಬಿಯನ್ಸ್‌ ತಂಡಕ್ಕೆ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲಾವರ್ ಅವರು ಮುಖ್ಯ ಕೋಚ್ ಆಗಿದ್ದಾರೆ.

‘ಈ ಟೂರ್ನಿಯಲ್ಲಿ ಆಡಲು ಪುಳಕಗೊಂಡಿದ್ದೇನೆ. ವಿಶ್ವದಲ್ಲಿರುವ ಕಾರ್ಪೋರೆಟ್‌ ಲೀಗ್‌ಗಳಲ್ಲಿ ಆಡುವುದು ನನ್ನ ಗುರಿ. ಆ ಮೂಲಕ ವಿವಿಧ ಟೂರ್ನಿಯಲ್ಲಿ ಕ್ರಿಕೆಟ್‌ ಆಡುವ ಮಜಾವನ್ನು ಅನುಭವಿಸುತ್ತೇನೆ’ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು