ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದು ಆಟ ಮುಗಿಸಿದ ಕಿಂಗ್ಸ್‌ ಇಲೆವನ್

ಕೆ.ಎಲ್. ಮಿಂಚಿನ ಅರ್ಧಶತಕ
Last Updated 5 ಮೇ 2019, 17:30 IST
ಅಕ್ಷರ ಗಾತ್ರ

ಮೊಹಾಲಿ: ಕನ್ನಡಿಗ ಕೆ.ಎಲ್ ರಾಹುಲ್ ಅವರ ಮಿಂಚಿನ ಅರ್ಧಶತಕದ ಬಲದಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಭಾನುವಾರ ಸಂಜೆ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಜಯಿಸಿತು.

ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್‌ ತಂಡವು ಆರು ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಪಾಯಿಂಟ್‌ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆಯಿತು. ಪ್ಲೇ ಆಫ್‌ ಪ್ರವೇಶ ಗಳಿಸುವಲ್ಲಿ ವಿಫಲವಾಯಿತು. ಆದರೆ ಪಂಜಾಬ್ ತಂಡವು, ಪಟ್ಟಿಯ ಅಗ್ರಸ್ಥಾನದಲ್ಲಿರುವ ಧೋನಿ ಬಳಗವನ್ನು ಮಣಿಸಿದ ಸಮಾಧಾನದೊಂದಿಗೆ ಅಭಿಯಾನ ಮುಗಿಸಿತು.

ಟಾಸ್ ಗೆದ್ದ ಕಿಂಗ್ಸ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆರಂಭಿಕ ಬ್ಯಾಟ್ಸ್‌ಮನ್ ಫಾಫ್ ಸು ಪ್ಲೆಸಿ (96; 55ಎಸೆತ, 10ಬೌಂಡರಿ, 4 ಸಿಕ್ಸರ್) ಮತ್ತು ಸುರೇಶ್ ರೈನಾ (53; 38ಎಸೆತ, 5ಬೌಂಡರಿ, 2ಸಿಕ್ಸರ್) ಅವರ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 170 ರನ್ ಗಳಿಸಿತು.

ಅದಕ್ಕುತ್ತರವಾಗಿ ಪಂಜಾಬ್ ತಂಡವು 18 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 173 ರನ್‌ ಗಳಿಸಿ ಗೆದ್ದಿತು. 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್ ಮಿಂಚಿದರು.

ಅವರು ಒಟ್ಟು 36 ಎಸೆತಗಳಲ್ಲಿ 71 ರನ್‌ ಗಳಿಸಿ ಔಟಾದರು. ಅದರಲ್ಲಿ ಏಳು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು.

ರಾಹುಲ್ ಮತ್ತು ಕ್ರಿಸ್‌ ಗೇಲ್ (28; 28ಎಸೆತ, 2ಬೌಂಡರಿ, 2ಸಿಕ್ಸರ್) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 108 ರನ್‌ಗಳನ್ನು ಪೇರಿಸಿದರು. ಇದರಿಂದಾಗಿ ತಂಡದ ಗೆಲುವು ಸುಲಭವಾಯಿತು. ಚೆನ್ನೈ ತಂಡದ ನಾಯಕ ಧೋನಿಯ ಕಾರ್ಯತಂತ್ರಗಳನ್ನು ರಾಹುಲ್ ಮತ್ತು ಗೇಲ್ ಪುಡಿಗಟ್ಟಿದರು.

11ನೇ ಓವರ್‌ನಲ್ಲಿ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಅವರು ರಾಹುಲ್ ಮತ್ತು ಗೇಲ್ ಇಬ್ಬರ ವಿಕೆಟ್‌ಗಳನ್ನೂ ಗಳಿಸಿದರು. ನಿಕೊಲಸ್ ಪೂರ್ನ (36 ರನ್ ) ತಮ್ಮ ಕಾಣಿಕೆ ನೀಡಿದರು. ಆದರೆ, ಮಯಂಕ್ ಅಗರವಾಲ್ ಕೇವಲ ಏಳು ರನ್ ಗಳಿಸಿ ನಿರ್ಗಮಿಸಿದರು.

ಆದರೆ, ಮನದೀಪ್ ಸಿಂಗ್ (ಔಟಾಗದೆ 11) ಮತ್ತು ಸ್ಯಾಮ್ ಕರನ್ ಔಟಾಗದೆ 6 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮಟ್ಟಿಸಿದರು.

ಸ್ಯಾಮ್ ಕರನ್ ಅವರು ಬೌಲಿಂಗ್‌ನಲ್ಲಿಯೂ ಮಿಂಚಿದರು. ಚೆನ್ನೈ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡಿದರು. ಶೇನ್ ವಾಟ್ಸನ್ ಅವರ ವಿಕೆಟ್‌ ಅನ್ನು ಐದನೇ ಓವರ್‌ನಲ್ಲಿ ಗಳಿಸಿದರು. ಆದರೆ ಡುಪ್ಲೆಸಿ ಮತ್ತು ರೈನಾ ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 120 ರನ್‌ ಸೇರಿಸಿದರು. ಆದರೆ, ರೈನಾ ಔಟಾದ ನಂತರ ಕ್ರೀಸ್‌ಗೆ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT