ಢಾಕಾ: ಬಾಂಗ್ಲಾದೇಶ ರಾಷ್ಟ್ರೀಯ ಫುಟ್ಬಾಲ್ ತಂಡದ 11 ಆಟಗಾರರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. 2022ರ ವಿಶ್ವಕಪ್ನ ಅರ್ಹತಾ ಟೂರ್ನಿಗೆ ಸಿದ್ಧಗೊಳುತ್ತಿರುವ ತಂಡದ ಮೇಲೆ ಇದು ಭಾರೀ ಪರಿಣಾಮ ಬೀರಿದೆ.

ತಂಡದ ತರಬೇತುದಾರ ಜೆಮಿ ಡೇ ಅವರು ಆಯೋಜಿಸಿದ್ದ ತರಬೇತಿ ಶಿಬಿರ ಸೇರಲು ನಿರ್ಧರಿಸಿದ್ದ 24 ಆಟಗಾರರನ್ನು ತಪಾಸಣೆಗೆ ಒಳಪಡಿಸಿದಾಗ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

‘ಕೋವಿಡ್ ಪರೀಕ್ಷೆಗೆ ಒಳಪಡುವ ಮುನ್ನ ಯಾವ ಆಟಗಾರರಲ್ಲಿಯೂ ಸೋಂಕಿನ ಲಕ್ಷಣಗಳು ಕಂಡುಬಂದಿರಲಿಲ್ಲ‘ ಎಂದು ಬಾಂಗ್ಲಾದೇಶ ಫುಟ್ಬಾಲ್ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಅಬು ನಯೀಂ ಶೋಹಾಗ್ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ 2,50,000ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 3,300 ಜನ ಸಾವನ್ನಪ್ಪಿದ ವರದಿಯಾಗಿದೆ.

ವಿಶ್ವ ಫುಟ್ಬಾಲ್ ಕ್ರಮಾಂಕದಲ್ಲಿ ಬಾಂಗ್ಲಾದೇಶ 187ನೇ ಸ್ಥಾನದಲ್ಲಿದೆ. 2020ರ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಈ ತಂಡ ಇ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.