ಸೋಮವಾರ, ಮಾರ್ಚ್ 27, 2023
31 °C

ಎಐಎಫ್‌ಎಫ್‌: ಮೊದಲ ಬಾರಿಗೆ ಪೂರ್ಣಪ್ರಮಾಣದ ರೆಫರಿ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಫುಟ್‌ಬಾಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದದಲ್ಲಿ ಎಲೀಟ್‌ ರೆಫರಿ ಮತ್ತು ಸಹಾಯಕ ರೆಫರಿಗಳ ಮೊದಲ ಬ್ಯಾಚ್‌ಅನ್ನು ನೇಮಕ ಮಾಡಿಕೊಳ್ಳಲಾಗಿದೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಮತ್ತು ಅದರ ವ್ಯಾವಹಾರಿಕ ಪಾಲುದಾರ ಎಲೀಟ್‌ ರೆಫರಿಯಿಂಗ್‌ ಡೆವಲಪ್‌ಮೆಂಟ್‌ ಪ್ಲಾನ್‌ನ (ಇಆರ್‌ಡಿಪಿ) ಜಂಟಿ ಹೂಡಿಕೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಭಾರತ ಫುಟ್‌ಬಾಲ್ ವ್ಯವಸ್ಥೆಯಲ್ಲಿ ರೆಫರಿ ಹುದ್ದೆಗಳನ್ನು ವೃತ್ತಿಜೀವನದ ಮಾರ್ಗವಾಗಿ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.

ಮೊದಲ ಬ್ಯಾಚ್‌ನಲ್ಲಿ ಎಂಟು ರೆಫರಿಗಳು ಮತ್ತು ಅಷ್ಟೇ ಸಂಖ್ಯೆಯ ಸಹಾಯಕ ರೆಫರಿಗಳು ಇದ್ದಾರೆ. 2024ರಲ್ಲಿ ಎರಡನೇ ಬ್ಯಾಚ್‌ಅನ್ನು ಘೋಷಿಸಲಾಗುತ್ತದೆ.

‘ಈ ಕ್ರಮವು ಹೆಚ್ಚಿನ ರೆಫರಿಗಳನ್ನು ಸೆಳೆಯುತ್ತದೆ. ವಿಶೇಷವಾಗಿ ತಳಮಟ್ಟದಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಫುಟ್‌ಬಾಲ್‌ ಕ್ರೀಡೆಯ ಬೆಳವಣಿಗೆಗೆ ಇದು ಅನುಕೂಲವಾಗಲಿದೆ‘ ಎಂದು ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್ ಚೌಬೆ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು