ಭಾನುವಾರ, ಫೆಬ್ರವರಿ 23, 2020
19 °C
ಯುರೋಪಿಯನ್‌ ಚಾಂಪಿಯನ್ಸ್ ಲೀಗ್

ಯುಸಿಎಲ್‌ನಲ್ಲಿ ಗೋಲು ಗಳಿಸಿದ ಅತಿ ಕಿರಿಯ ಆಟಗಾರ ಎನಿಸಿದ ಫಾಟಿ: ಬಾರ್ಸಿಲೋನಾಗೆ ಜಯ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮಿಲಾನ್‌ (ಇಟಲಿ): ಯುರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ಚಾಂಪಿಯನ್ಸ್ ಲೀಗ್‌ನ ಗುಂಪು ಹಂತದ ಪಂದ್ಯದಲ್ಲಿ ಇಂಟರ್‌ ಮಿಲಾನ್‌ ತಂಡದ ವಿರುದ್ಧ ಬಾರ್ಸಿಲೋನಾ ಆಟಗಾರ ಅನ್ಸು ಫಾಟಿ ಗೋಲು ಗಳಿಸಿದರು. ಆ ಮೂಲಕ ಯುರೋಪಿಯನ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ (ಯುಸಿಎಲ್‌) ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎನಿಸಿದರು. ಪಂದ್ಯದ 86ನೇ ನಿಮಿಷದಲ್ಲಿ ಗೋಲು ಗಳಿಸಿದ ಫಾಟಿ ವಯಸ್ಸು ಈಗ 17 ವರ್ಷ, ನಲವತ್ತು ದಿನಗಳು.

ಇಲ್ಲಿನ ಸ್ಯಾನ್‌ ಸಿರೊ ಕ್ರೀಡಾಂಗಣದಲ್ಲಿ ನಡೆದ ಎಫ್‌ ಗುಂಪಿನ ಅಂತಿಮ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ಮಿಲಾನ್‌ ವಿರುದ್ಧ 2–1 ಅಂತರದಲ್ಲಿ ಗೆಲುವು ಸಾಧಿಸಿತು. ಬಾರ್ಸಿಲೋನಾ ತಂಡದ ಕಾರ್ಲೆಸ್‌ ಪೆರೆಜ್‌ 23ನೇ ನಿಮಿಷದಲ್ಲಿ ಗೋಲು ಗಳಿಸಿದ್ದರು. 44ನೇ ನಿಮಿಷದಲ್ಲಿ ಮಿಲಾನ್‌ ತಂಡದ ರೊಮೆಲು ಲುಕಾಕು ಗೋಲು ಗಳಿಸಿ ಹೋರಾಟವನ್ನು ಸಮಬಲ ಗೊಳಿಸಿದ್ದರು.

ಅಂತಿಮವಾಗಿ ಫಾಟಿ 86ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡವನ್ನು ಜಯದತ್ತ ಕೊಂಡೊಯ್ದರು.

ಆಡಿರುವ ಒಟ್ಟು ಆರು ಪಂದ್ಯಗಳಲ್ಲಿ ನಾಲ್ಕು ಜಯ ಸಾಧಿಸಿರುವ ಬಾರ್ಸಿಲೋನಾ ‘ಎಫ್‌’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇಷ್ಷೇ ಪಂದ್ಯಗಳಿಂದ 3 ಗೆಲುವು ಸಾಧಿಸಿರುವ ಡಾರ್ಟ್‌ಮಂಡ್‌, ಎರಡು ಗೆಲುವು ಕಂಡಿರುವ ಇಂಟರ್‌ ಮಿಲಾನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಒಂದೂ ಗೆಲುವು ಸಾಧಿಸದ ಸ್ಲಾವಿಯಾ ಪ್ರಹ ಕೊನೆಯ ಸ್ಥಾನದಲ್ಲಿದೆ.

1997ರಲ್ಲಿ ರೋಸೆನ್‌ಬರ್ಗ್‌ ವಿರುದ್ದದ ಪಂದ್ಯದಲ್ಲಿ ಗೋಲು ಗಳಿಸಿದ್ದ ಪೀಟರ್‌ ಒಫೋರಿ ಕ್ಯುಆಯೆ ಯುಸಿಎಲ್‌ನಲ್ಲಿ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎನಿಸಿದ್ದರು. ಒಲಿಂಪಿಯಾಕಸ್‌ ತಂಡದ ಪರ ಕಣಕ್ಕಿಳಿದಿದ್ದ ಪೀಟರ್‌ಗೆ ಆಗ 17 ವರ್ಷ 195 ದಿನ ವಯಸ್ಸಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು