ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ– ಮಝಿಯಾ ಪಂದ್ಯ ಇಂದು

Last Updated 18 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಮಾಲಿ (ಮಾಲ್ಟೀವ್ಸ್‌): ಬೆಂಗಳೂರು ಎಫ್‌ಸಿ ತಂಡ, ಬುಧವಾರ ಇಲ್ಲಿ ನಡೆಯುವ ಎಎಫ್‌ಸಿ ಕಪ್ ಪ್ಲೇ ಆಫ್‌ನ ಮೊದಲ ಲೆಗ್‌ ಪಂದ್ಯದಲ್ಲಿ ಮಾಲ್ಟೀವ್ಸ್‌ನ ಮಝಿಯಾ ಎಫ್‌ಸಿ ತಂಡವನ್ನು ಎದುರಿಸಲಿದೆ.

ಐಎಸ್‌ಎಲ್‌ ಟೂರ್ನಿಯ ಲೀಗ್‌ ಹಂತದಲ್ಲಿ ಅಗ್ರಸ್ಥಾನದ ಅವಕಾಶವನ್ನು ಇಷ್ಟರಲ್ಲೇ ಕಳೆದುಕೊಂಡಿರುವ ಬಿಎಫ್‌ಸಿ ತಂಡಕ್ಕೆ, ಬುಧವಾರದ ಪಂದ್ಯದಲ್ಲಿನ ಗೆಲುವು ಸಮಾಧಾನ ತರಬಲ್ಲದು. ಐಎಸ್‌ಎಲ್‌ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆಯುವ ಮುಂದಿನ ಸಾಲಿನ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಆಡುವ ಅರ್ಹತೆ ಪಡೆಯುತ್ತದೆ.

ಭೂತಾನ್‌ನ ಪಾರೊ ಎಫ್‌ಸಿ ವಿರುದ್ಧ ಕಳೆದ ವಾರ ನಡೆದ ಪಂದ್ಯಗಳಲ್ಲಿ ಒಟ್ಟಾರೆ 10–1 ಗೋಲು ಅಂತರ ಸಾಧಿಸಿದ ಬಿಎಫ್‌ಸಿ ಪ್ಲೇ ಆಫ್‌ ಹಂತಕ್ಕೆ ಅರ್ಹತೆ ಪಡೆದಿತ್ತು. ‘ಬಿಸಿಲ ವಾತಾವರಣದಲ್ಲಿ ತಮ್ಮ ತಂಡ ಉತ್ತಮ ಫಲಿತಾಂಶ ಪಡೆಯಲು ಶ್ರಮ ಹಾಕಲಿದೆ’ ಎಂದು ಬಿಎಫ್‌ಸಿ ಕೋಚ್‌ ಕಾರ್ಲೊಸ್‌ ಕ್ವದ್ರತ್‌ ಹೇಳಿದ್ದಾರೆ.

‘ನಾವೀಗ ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ ನಾಳಿನ ಪಂದ್ಯದ ಸನ್ನಿವೇಶವೇ ಬೇರೆ. ಹಿಂದಿನ ಫಲಿತಾಂಶಗಳು ನಮಗೆ ಮುಖ್ಯವಾಗುವುದಿಲ್ಲ’ ಎಂದಿದ್ದಾರೆ.

ನಾಯಕ ಸುನಿಲ್‌ ಚೆಟ್ರಿ ಸ್ನಾಯು ನೋವಿನಿಂದಾಗಿ ಬುಧವಾರದ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಪಾರೊ ವಿರುದ್ಧದ ಪಂದ್ಯಗಳಲ್ಲಿ ‘ಹಳದಿ ಕಾರ್ಡ್‌ ದರ್ಶನ’ದ ಪರಿಣಾಮ ಅಮಾನತಿಗೆ ಒಳಗಾಗಿರುವ ವಾಂಗ್‌ಜಾಮ್‌ ಸುರೇಶ್‌ ಸಿಂಗ್‌ ಕೂಡ ಆಡುವಂತಿಲ್ಲ.

ಬಿಎಫ್‌ಸಿ– ಮಝಿಯಾ ಪ್ಲೇ ಆಫ್‌ ಪಂದ್ಯದ ವಿಜೇತರು ಎಫ್‌ಸಿ ಕಪ್‌ ‘ಇ’ ಗುಂಪಿನಲ್ಲಿ ಆಡಲಿದ್ದಾರೆ. ಬಾಂಗ್ಲಾದೇಶದ ಬಸುಂಧರಾ ಕಿಂಗ್ಸ್‌, ಭಾರತದ ಚೆನ್ನೈ ಸಿಟಿ ಎಫ್‌ಸಿ ಮತ್ತು ಮಾಲ್ಟೀವ್ಸ್‌ನ ಟಿಸಿ ಸ್ಪೋರ್ಟ್ಸ್‌ ಕ್ಲಬ್‌ ಈಗಾಗಲೇ ‘ಇ’ ಗುಂಪಿನಲ್ಲಿವೆ.

ಬಿಎಫ್‌ಸಿ ಆಟಗಾರರು ಪ್ರಯಾಣ, ಪಂದ್ಯಗಳಿಂದ ದಣಿದಿದ್ದಾರೆ. ಇದರಿಂದ ಪ್ರದರ್ಶನದ ಮೇಲೆಯೂ ಪರಿಣಾಮವಾಗುತ್ತಿದೆ ಎಂದು ಕ್ವದ್ರತ್ ಒಪ್ಪಿಕೊಂಡರು.

ಪಂದ್ಯ ಆರಂಭ: ಸಂಜೆ 4.30 .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT