ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ಸೇರಿದ ರ್‍ಯಾನ್‌ ವಿಲಿಯಮ್ಸ್

Published 29 ಜುಲೈ 2023, 14:17 IST
Last Updated 29 ಜುಲೈ 2023, 14:17 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾದ ಸ್ಟ್ರೈಕರ್‌ ರ್‍ಯಾನ್‌ ವಿಲಿಯಮ್ಸ್‌ ಅವರು ಒಂದು ವರ್ಷದ ಅವಧಿಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಸೇರಿಕೊಂಡಿದ್ದಾರೆ.

2023–24ರ ಋತುವಿಗೆ ಮುನ್ನ ತನ್ನ ಫಾರ್ವರ್ಡ್‌ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಎಫ್‌ಸಿ ಈ ಹೆಜ್ಜೆಯಿಟ್ಟಿದೆ. ಬೆಂಗಳೂರಿನ ತಂಡ ಕಳೆದ ವಾರ ಇಂಗ್ಲೆಂಡ್‌ನ ಸ್ಟ್ರೈಕರ್‌ ಕರ್ಟಿಸ್‌ ಮೇನ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.

ರ್‍ಯಾನ್‌ ಅವರು ಈಚೆಗೆ ಆಸ್ಟ್ರೇಲಿಯಾದ ಎ–ಲೀಗ್‌ನಲ್ಲಿ ಪರ್ತ್‌ ಗ್ಲೋರಿ ತಂಡದ ಪರ ಆಡಿದ್ದರು. 29 ವರ್ಷದ ಅವರು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಹಲವು ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾದ 20 ಮತ್ತು 23 ವರ್ಷ ವಯಸ್ಸಿನೊಳಗಿನವರ ರಾಷ್ಟ್ರೀಯ ತಂಡದಲ್ಲೂ ಆಡಿದ್ದರು.

‘ರ‍್ಯಾನ್‌ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಂತಸ ಉಂಟುಮಾಡಿದೆ. ಫಾರ್ವರ್ಡ್‌ ಮಾತ್ರವಲ್ಲದೆ, ಮಿಡ್‌ಫೀಲ್ಡ್‌ನಲ್ಲೂ ಆಡುವ ಸಾಮರ್ಥ್ಯ ಅವರಿಗಿದೆ. ಇಂಗ್ಲೆಂಡ್‌ನ ಕ್ಲಬ್‌ಗಳಲ್ಲಿ ಆಡುತ್ತಿದ್ದಾಗಲೇ ನಾನು ಅವರ ಬಗ್ಗೆ ತಿಳಿದುಕೊಂಡಿದ್ದೆ’ ಎದು ಬಿಎಫ್‌ಸಿ ಕೋಚ್‌ ಸೈಮನ್‌ ಗ್ರೇಸನ್‌ ಹೇಳಿದ್ದಾರೆ.

7ನೇ ಸಂಖ್ಯೆಯ ಪೋಷಾಕು ಧರಿಸಿ ಆಡಲಿರುವ ಅವರು, ಈ ಋತುವಿನ ಆರಂಭಕ್ಕೆ ಮುನ್ನವೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT