ಬೆಂಗಳೂರು: ಐಎಸ್‌ಎಲ್‌ನಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಮಂಗಳವಾರ ಸ್ಪೇನ್‌ನ ನಿಲಿ ಪೆರ್ಡೊಮೊ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಒಡಿಶಾ ಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿರುವ ಸ್ಟ್ರೈಕರ್ ಮ್ಯಾನುಯೆಲ್ ಒನ್ವು ಅವರು ಬಿಎಫ್‌ಸಿ ತಂಡವನ್ನು ತೊರೆದಿದ್ದಾರೆ. ಹೀಗಾಗಿ ಪೆರ್ಡೊಮೊ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರು ಶೀಘ್ರವೇ ತಂಡ ಸೇರಿಕೊಳ್ಳಲಿದ್ದಾರೆ.

2015–16ನೇ ಋತುವಿನಲ್ಲಿ ಎಫ್‌ಸಿ ಬಾರ್ಸಿಲೋನಾ ತಂಡ ಸೇರಿದ್ದ 25 ವರ್ಷ ವಯಸ್ಸಿನ ಪೆರ್ಡೊಮೊ ಅವರು ಲಾ ಲಿಗಾ ಟೂರ್ನಿಗೆ ಪದಾರ್ಪಣೆ ಮಾಡಿ ದ್ದರು. ಬಳಿಕ ಸೆಗುಂಡಾ ಡಿವಿಷನ್ ಲೀಗ್‌ನಲ್ಲಿ ಆಡುವ ಅಲ್ಬಸೆಟೆ ಮತ್ತು ಗ್ರೀಕ್‌ನ ಪ್ಲಾಟಾನಿಯಸ್ ಎಫ್‌ಸಿ ತಂಡಗಳನ್ನೂ ಪ್ರತಿನಿಧಿಸಿದ್ದರು.

‘ಬಿಎಫ್‌ಸಿ, ಭಾರತದ ಪ್ರಮುಖ ಕ್ಲಬ್‌ಗಳಲ್ಲಿ ಒಂದಾಗಿದೆ. ಆ ತಂಡದ ಪರ ಆಡಲು ಉತ್ಸುಕನಾಗಿದ್ದೇನೆ. ನನ್ನ ಮೇಲೆ ವಿಶ್ವಾಸ ಇಟ್ಟ ಫ್ರಾಂಚೈಸ್ ಮತ್ತು ಮುಖ್ಯ ಕೋಚ್ ಕಾರ್ಲಸ್ ಕ್ವದ್ರತ್ ಅವರಿಗೆ
ಕೃತಜ್ಞನಾಗಿದ್ದೇನೆ’ ಎಂದು ಪೊರ್ಡೊಮೊ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.