ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಚೆನ್ನೈಯಿನ್ ಎಫ್‌ಸಿ ಫೌಂಡೇಷನ್‌ನಿಂದ ನೆರವು

Last Updated 27 ಮೇ 2021, 13:11 IST
ಅಕ್ಷರ ಗಾತ್ರ

ಚೆನ್ನೈ: ಕೋವಿಡ್‌–19ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ನಗರದ ಬಡ ಕಟುಂಬಗಳಿಗೆ ನೆರವಾಗಲು ಚೆನ್ನೈಯಿನ್ ಎಫ್‌ಸಿ (ಸಿಎಫ್‌ಸಿ) ಫುಟ್‌ಬಾಲ್ ತಂಡದ ಫೌಂಡೇಷನ್ ನಿರ್ಧರಿಸಿದೆ.

‘ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಸಿಎಫ್‌ಸಿಯು ತನ್ನ ಸಹ ಪ್ರಾಯೋಜಕ ಕಂಪನಿ ಎಸಿಕೆಒ ಇನ್ಸುರೆನ್ಸ್ ಜೊತೆಗೂಡಿ ಅಕ್ಷಯಪಾತ್ರ ಫೌಂಡೇಷನ್‌ನೊಂದಿಗೆ ಪಡಿತರ ಕಿಟ್ ವಿತರಿಸಲಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಹಭಾಗಿತ್ವದ ಭಾಗವಾಗಿ, ಚೆನ್ನೈಯಿನ್ ಎಫ್‌ಸಿ ಫೌಂಡೇಷನ್ ಮತ್ತು ಎಸಿಕೆಒ ಇನ್ಷುರೆನ್ಸ್ ಕಂಪನಿ ₹ 10 ಲಕ್ಷ ಸಂಗ್ರಹಿಸಿವೆ. ಈ ಹಣವನ್ನು ಚೆನ್ನೈನ ಸುತ್ತಮುತ್ತಲಿನ ಸಾವಿರ ಕೋವಿಡ್ ಪೀಡಿತ ಕುಟುಂಬಗಳಿಗೆ ಅಕ್ಷಯ ಪಾತ್ರ ಪ್ರತಿಷ್ಠಾನದ ಮೂಲಕ ಪಡಿತರ ಕಿಟ್‌ಗಳನ್ನು ಸಂಗ್ರಹಿಸಿ ವಿತರಿಸಲು ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT