ಬುಧವಾರ, ಅಕ್ಟೋಬರ್ 28, 2020
28 °C

ಚೆನ್ನೈಯಿನ್‌ ಎಫ್‌ಸಿಗೆ ಸಾಬಾ ಲಾಜ್ಲೊ ಮುಖ್ಯ ಕೋಚ್‌

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಚೆನ್ನೈಯಿನ್‌ ಎಫ್‌ಸಿ ತಂಡಕ್ಕೆ ಅನುಭವಿ ಸಾಬಾ ಲಾಜ್ಲೊ ಅವರು  ಮುಖ್ಯ ಕೋಚ್‌ ಆಗಿ ಭಾನುವಾರ ನೇಮಕಗೊಂಡಿದ್ದಾರೆ.

ಹಂಗರಿಯ 56 ವರ್ಷದ ಲಾಜ್ಲೊ ಅವರು ಏಷ್ಯಾದಲ್ಲಿ ಮೊದಲ ಬಾರಿ ಕೋಚಿಂಗ್‌ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅಂತರರಾಷ್ಟ್ರೀಯ ಹಾಗೂ ಕ್ಲಬ್‌ ಪಂದ್ಯಗಳು ಸೇರಿ ಎರಡು ದಶಕಕ್ಕೂ ಅಧಿಕ ಕಾಲ ಅವರು ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಲಿಥುವೇನಿಯಾ ಹಾಗೂ ಉಗಾಂಡಾ ರಾಷ್ಟ್ರೀಯ ತಂಡಗಳು, ಎಂಟು ಕ್ಲಬ್‌ಗಳು ಸೇರಿ ಎಂಟು ದೇಶಗಳಲ್ಲಿ ಲಾಜ್ಲೊ ತರಬೇತಿ ನೀಡಿದ್ದಾರೆ. ಚೆನ್ನೈ ಎಫ್‌ಸಿಯಲ್ಲಿ ಕೋಚ್‌ ಆಗಿದ್ದ ಓವೆನ್‌ ಕೊಯ್ಲೆ ಸ್ಥಾನವನ್ನು ಲಾಜ್ಲೊ ತುಂಬಲಿದ್ದಾರೆ. 2019–20ರ ಐಎಸ್‌ಎಲ್‌ ಋತುವಿನಲ್ಲಿ ಕೊಯ್ಲೆ ತಂಡವನ್ನು ಫೈನಲ್‌ ತಲುಪುವಂತೆ ಮಾಡಿದ್ದರು. ಇತ್ತೀಚೆಗೆ ಅವರು ಜಮ್‌ಷೆಡ್‌ಪುರ ಎಫ್‌ಸಿಯ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದಾರೆ.

‘ಚೆನ್ನೈ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ‘ ಎಂದು ಲಾಜ್ಲೊ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು