ಬುಧವಾರ, ಅಕ್ಟೋಬರ್ 23, 2019
21 °C

ಫುಟ್‌ಬಾಲ್‌: ಸೆಮಿಗೆ ಪೆರು

Published:
Updated:

ಸಲ್ವಡೊರ್, ಬ್ರೆಜಿಲ್‌: ಪೆರು ತಂಡದವರು ಕೊಪಾ ಅಮೆರಿಕ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯ ‍ಪೆನಾಲ್ಟಿ ಶೂಟೌಟ್‌ನಲ್ಲಿ ಪೆರು 5–4 ಗೋಲುಗಳಿಂದ ಉರುಗ್ವೆ ತಂಡಕ್ಕೆ ಆಘಾತ ನೀಡಿತು.

ನಿಗದಿತ ಅವಧಿಯ ಆಟ ಗೋಲು ರಹಿತವಾಗಿತ್ತು. ಹೀಗಾಗಿ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಈ ಅವಕಾಶದಲ್ಲಿ ಪೆರು ಆಟಗಾರರು ಮಿಂಚಿದರು. ನಿರ್ಣಾಯಕ ಹಂತದಲ್ಲಿ ಉರುಗ್ವೆ ತಂಡದ ಲೂಯಿಸ್‌ ಸ್ವಾರೆಜ್‌ ಅವರ ಸ್ಪಾಟ್‌ ಕಿಕ್
ಪ್ರಯತ್ನವನ್ನು ವಿಫಲಗೊಳಿಸಿದ ಗೋಲ್‌ಕೀಪರ್‌ ಪೆಡ್ರೊ ಗಲ್ಲೆಸ್‌, ಪೆರು ತಂಡದ ಸಂಭ್ರಮಕ್ಕೆ ಕಾರಣರಾದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)