ಮ್ಯಾಡ್ರಿಡ್:ರಿಯಲ್ ಮ್ಯಾಡ್ರಿಡ್ ತಂಡದ ಪ್ರಮುಖ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇಟೆಲಿ ಮೂಲದ ಯುವೆಂಟಸ್ ತಂಡ ಸೇರಿದ್ದಾರೆ. 2009ರಿಂದ ಸ್ಪಾನಿಶ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡದ ಸೂಪರ್ ಸ್ಟಾರ್ ಆಗಿದ್ದ ಕ್ರಿಸ್ಟಿಯಾನೊ ಅವರನ್ನು 112 ಮಿಲಿಯನ್ಯೂರೊಗೆ ಯುವೆಂಟಸ್ ತಂಡ ಖರೀದಿ ಮಾಡಿದೆ. ಇಷ್ಟೊಂದು ಬೃಹತ್ ಮೊತ್ತ ನೀಡಿ ಯಾವುದೇ ತಂಡ ಆಟಗಾರನನ್ನು ಖರೀದಿಸಿಲ್ಲ.ಅದರಲ್ಲಿಯೂ 30 ವರ್ಷ ದಾಟಿದ ಆಟಗಾರರನ್ನು ಯಾವುದೇ ತಂಡ ಇಷ್ಟೊಂದು ಮೊತ್ತ ನೀಡಿ ಖರೀದಿಸುವುದಿಲ್ಲ. ಈಗ ರೊನಾಲ್ಡೊ ವಯಸ್ಸು 33!