ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲುಗಳ ಶತಕದತ್ತ ರೊನಾಲ್ಡೊ: ‘ಟಾಪ್–10’ ಗೋಲುವೀರರ ಪಟ್ಟಿಯಲ್ಲಿ ಭಾರತದ ಚೆಟ್ರಿ

ಶತಕ ಗಳಿಸಲು ರೊನಾಲ್ಡೊ 2 ಗೋಲು ಬೇಕು
Last Updated 15 ನವೆಂಬರ್ 2019, 16:35 IST
ಅಕ್ಷರ ಗಾತ್ರ

ನವದೆಹಲಿ:ಪೋರ್ಚುಗಲ್‌ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ಗುರುವಾರ ಲಿಥುವೇನಿಯಾ ಎದುರು ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸುವ ಮೂಲಕ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಒಟ್ಟು 98 ಗೋಲು ಗಳಿಸಿದ ಸಾಧನೆ ಮಾಡಿದರು. ಪೋರ್ಚುಗಲ್‌ ಪರ ಇದುವರೆಗೆ ಒಟ್ಟು 9 ಸಲ ಹ್ಯಾಟ್ರಿಕ್‌ ಗೋಲು ಸಿಡಿಸಿರುವ ರೊನಾಲ್ಡೊ, ಒಟ್ಟಾರೆ 55 ಬಾರಿ ಹ್ಯಾಟ್ರಿಕ್‌ ಬಾರಿಸಿದ್ದಾರೆ.

2020ರ ಯುರೋಕಪ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್‌ 6–0 ಅಂತರರಿಂದ ಲಿಥುವೇನಿಯಾ ತಂಡವನ್ನು ಮಣಿಸಿತು.ಪೋರ್ಚುಗಲ್‌ ತಂಡ ಭಾನುವಾರ ಲುಕ್ಸಂಬರ್ಗ್‌ ಎದುರು ಕಣಕ್ಕಿಳಿಯಲಿದ್ದು, ರೊನಾಲ್ಡೊಗೆ ನೂರು ಗೋಲುಗಳ ಗಡಿ ದಾಟಲು ಇನ್ನು ಎರಡು ಗೋಲುಗಳು ಬೇಕಾಗಿವೆ. ಆ ಮೂಲಕ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 100 ಗೋಲು ಕಲೆಹಾಕಿದ ವಿಶ್ವದ 2ನೇ ಆಟಗಾರ ಎನಿಸಲು ಸಜ್ಜಾಗಿದ್ದಾರೆ.

ಇರಾನ್‌ ತಂಡದ ಮಾಜಿ ಆಟಗಾರ ಅಲಿ ದಾಯಿಒಟ್ಟು 109 ಗೋಲು ಸಿಡಿಸಿದ್ದು ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ ಅಲಿ ಹಾಗೂ ರೊನಾಲ್ಡೊ ನಡುವೆ ಇರುವ ಗೋಲುಗಳ ಅಂತರ ಕೇವಲ 11 ಅಷ್ಟೇ.

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿಅತಿಹೆಚ್ಚು ಗೋಲು ಗಳಿಸಿದ ಅಗ್ರ 10ಆಟಗಾರರು

ಸಂಖ್ಯೆ ಆಟಗಾರ ದೇಶ ಗೋಲುಗಳು
01. ಅಲಿ ದಾಯಿ ಇರಾನ್‌ 109
02. ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್‌ 98
03. ಫೆರೆಂಕ್‌ ಪಸ್ಕಾಸ್‌ ಹಂಗೇರಿ 84
04.
ಕುನಿಷಿಗೆ ಕಮಮೊಟೊ ಜಪಾನ್‌ 80
05. ಗಾಡ್‌ಫ್ರೇ ಚಿಟಾಲು ಝಾಂಬಿಯಾ 79
06. ಹುಸೇನ್ ಸಯೀದ್‌ ಇರಾಕ್‌ 78
07. ಪೆಲೆ ಬ್ರೆಜಿಲ್ 77
08. ಸ್ಯಾಂಡರ್‌ ಕೊಕ್ಸಿಸ್‌ ಹಂಗೇರಿ 75
09. ಬಷರ್‌ ಅಬ್ದುಲ್ಲಾ ಕುವೈತ್‌ 75

10.

ಸುನಿಲ್‌ ಚೆಟ್ರಿ ಭಾರತ 75
ಭಾರತ ಆಟಗಾರ ಸುನಿಲ್‌ ಚೆಟ್ರಿ
ಭಾರತ ಆಟಗಾರ ಸುನಿಲ್‌ ಚೆಟ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT