ಗುರುವಾರ , ಆಗಸ್ಟ್ 18, 2022
25 °C

ಫುಟ್ಬಾಲ್ ಆಟಗಾರ ರೊನಾಲ್ಡೊ ಒಡೆತನದ ₹13.3 ಕೋಟಿ ಮೌಲ್ಯದ ಕಾರು ಅಪಘಾತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಸ್ಪೇನ್‌: ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಒಡೆತನದ ₹13.3 ಕೋಟಿ ಮೌಲ್ಯದ ಬುಗಾಟಿ ವೆರಾನ್ ಕಾರು ಅಪಘಾತಕ್ಕೀಡಾಗಿರುವುದಾಗಿ ವರದಿಯಾಗಿದೆ. 

ಸೋಮವಾರ ಬೆಳಿಗ್ಗೆ ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶದ್ವಾರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. 

ದುಬಾರಿ ಬೆಲೆಯ ಸ್ಪೋರ್ಟ್ಸ್‌ ಕಾರುಗಳನ್ನು ಹೊಂದಿರುವ ಆಟಗಾರರಲ್ಲಿ ರೊನಾಲ್ಡೊ ಕೂಡ ಒಬ್ಬರು. ಪ್ರಸ್ತುತ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 

ವರದಿಗಳ ಪ್ರಕಾರ, ರೊನಾಲ್ಡೊ ಅವರ ಸಿಬ್ಬಂದಿಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಕಾರು ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. 

ಫೋಕ್ಸ್ ವ್ಯಾಗನ್ ಕಂಪನಿಯ ಬುಗಾಟಿ ವೇರಾನ್ ಕಾರು ಪ್ರಪಂಚದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ. 
 

ಇವನ್ನೂ ಓದಿ...

ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸಮಂತಾ ಪ್ರತಿಕ್ರಿಯೆ ಹೀಗಿತ್ತು?

ಪಾಕ್: ಹೆರಿಗೆ ವೇಳೆ ಶಿಶು ತಲೆ ಕತ್ತರಿಸಿ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!

ಐದು ಅಡಿ ಉದ್ದದ ಕೊಳಕ ಮಂಡಲವನ್ನು ನುಂಗಿದ ದೈತ್ಯ ನಾಗರ ಹಾವು: ವಿಡಿಯೊ ವೈರಲ್ 

ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಹೊಸ ಫೋಟೊ ವೈರಲ್ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು