ಸೋಮವಾರ, ಜುಲೈ 4, 2022
21 °C

ಎಫ್‌ಸಿ ಗೋವಾಗೆ ಹೊಸ ಕೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುತ್ತಿರುವ ಎಫ್‌ಸಿ ಗೋವಾ ತಂಡವು ಕೋಚ್‌ಗಳನ್ನು ಬದಲಾಯಿಸಿದೆ. ಈ ವರೆಗೆ ಕೋಚ್ ಆಗಿದ್ದ ಸರ್ಜಿಯೊ ಲೊಬೆರಾ ತಂಡವನ್ನು ತೊರೆದ ಕಾರಣ ಕ್ಲಿಫರ್ಡ್ ಮಿರಾಂಡ ಅವರನ್ನು ಮಧ್ಯಂತರ ಕೋಚ್ ಆಗಿ ನೇಮಿಸಲಾಗಿದೆ.

ಡೆರಿಕ್ ಪೆರೇರಾ ತಂಡದ ಸಲಹೆಗಾರರಾಗಿದ್ದು ರೋಮಾ ಕುನಿಲೆರ ಸಹಾಯಕ ಕೋಚ್ ಆಗಿರುವರು ಎಂದು ಐಎಸ್‌ಎಲ್‌ ಆಡಳಿತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮಿರಾಂಡ ಮೂರು ವರ್ಷಗಳಿಂದ ತಂಡದೊಂದಿಗೆ ಇದ್ದಾರೆ. 2017ರಲ್ಲಿ ಸಹಾಯಕ ಕೋಚ್ ಆಗಿದ್ದ ಅವರು ನಂತರ ತಾಂತ್ರಿಕ ಅಧಿಕಾರಿಯಾಗಿದ್ದರು. ಕಳೆದ ಬಾರಿ 23 ವರ್ಷದೊಳಗಿನ ಭಾರತ ತಂಡದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಹೊಸ ಕೋಚ್ ಮಾರ್ಗದರ್ಶನದಲ್ಲಿ ಗೋವಾ ತಂಡ ಫೆಬ್ರುವರಿ ಐದರಂದು ತವರಿನಲ್ಲಿ ಹೈದರಾಬಾದ್ ಎಫ್‌ಸಿ ತಂಡವನ್ನು ಎದುರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು