ನವದೆಹಲಿ: ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಆರು ಸ್ಥಾನಗಳ ಹಿನ್ನಡೆ ಅನುಭವಿಸಿರುವ ಭಾರತೀಯ ಫುಟ್ಬಾಲ್ ತಂಡ 142ನೇ ಸ್ಥಾನಕ್ಕಿಳಿದಿದೆ.

2016ರ ಅಕ್ಟೋಬರ್ ಬಳಿಕ ಭಾರತದ ಕೆಟ್ಟ ಸಾಧನೆ ಇದಾಗಿದೆ. ಅಂದು 148ನೇ ಸ್ಥಾನ ಪಡೆದಿತ್ತು.

ಅಲ್ಲದೆ 2023ರ ಡಿಸೆಂಬರ್ನಲ್ಲಿ 102ನೇ ಸ್ಥಾನದಲ್ಲಿದ್ದ ಭಾರತ ತದನಂತರ 40 ಸ್ಥಾನಗಳ ಕುಸಿತ ಅನುಭವಿಸಿದೆ.

1996ರಲ್ಲಿ 94ನೇ ಸ್ಥಾನ ಪಡೆದಿರುವುದು ಭಾರತದ ಈವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಇನ್ನು ಏಷ್ಯಾ ರಾಷ್ಟ್ರಗಳ ಪಕಿ ಭಾರತ 27ನೇ ಸ್ಥಾನದಲ್ಲಿದೆ.

ಏಷ್ಯಾ ಕಪ್ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 0-1 ಗೋಲುಗಳ ಅಂತರದ ಸೋಲು ಭಾರತದ ಹೀನಾಯ ಸಾಧನೆಗೆ ಕಾರಣವಾಯಿತು.

ಢಾಕಾದಲ್ಲಿ ಕೋಚ್ ಖಾಲಿದ್ ಜಮೀಲ್ ಮಾರ್ಗದರ್ಶನದಲ್ಲಿ ಬಾಂಗ್ಲಾ ವಿರುದ್ಧ ಕಣಕ್ಕಿಳಿದಿದ್ದ ಭಾರತ ಹೀನಾಯ ಸೋಲಿನೊಂದಿಗೆ ಮುಜುಗರಕ್ಕೀಡಾಗಿತ್ತು.

ಇದು 2003ರ ಬಳಿಕ ಬಾಂಗ್ಲಾ ವಿರುದ್ಧ ಎದುರಾದ ಮೊದಲ ಸೋಲಾಗಿದೆ.

ಕಳೆದ ತಿಂಗಳು ಗೋವಾದಲ್ಲಿ ಸಿಂಗಪುರ ವಿರುದ್ಧವೂ ಸೋಲನುಭವಿಸಿದ್ದ ಭಾರತ ತಂಡವು ಈಗಾಗಲೇ ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದಿದೆ.
.2026ರ ಫಿಫಾ ವಿಶ್ವಕಪ್ ಫುಟ್ಬಾಲ್ಗೆ ಅರ್ಹತೆ ಪಡೆದ ಕ್ಯುರಸಾವೊ!.ಮುಂದಿನ ವರ್ಷದ ಫುಟ್ಬಾಲ್ ವಿಶ್ವಕಪ್ ನನ್ನ ಪಾಲಿಗೆ ಕೊನೆಯದ್ದು: ರೊನಾಲ್ಡೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.