ಬುಧವಾರ, ಡಿಸೆಂಬರ್ 2, 2020
25 °C

ಕಾಲ್ಚೆಂಡಿನಾಟದ ಮಾಂತ್ರಿಕ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

prajavani

ಕ್ರಿಸ್ಟಿಯಾನೊ ರೊನಾಲ್ಡೊ...

34ರ ಹರೆಯದಲ್ಲೂ ಫುಟ್‌ಬಾಲ್‌ ಜಗತ್ತಿನಲ್ಲಿ ಮಿಂಚು ಹರಿಸುತ್ತಿರುವ ‘ಮಾಂತ್ರಿಕ’.

ಸಾಧನೆಯ ಮೂಲಕವೇ ಸದಾ ಸುದ್ದಿಯಲ್ಲಿರುವ ಪೋರ್ಚುಗಲ್‌ನ ಈ ತಾರೆ, ಸ್ಥಾಪಿಸಿರುವ ಮೈಲುಗಲ್ಲುಗಳು ಅಪಾರ. ತಮ್ಮ ಒರೆಗೆಯ ಬಹುತೇಕ ಆಟಗಾರರು ನಿವೃತ್ತಿಯತ್ತ ಮುಖ ಮಾಡಿದ್ದರೆ, ರೊನಾಲ್ಡೊ ಮಾತ್ರ ಈಗಲೂ ಅಂಗಳದಲ್ಲಿ ಮೋಡಿ ಮಾಡುತ್ತಾ ತಮ್ಮೊಳಗಿನ ಫುಟ್‌ಬಾಲ್‌ ಕಸುವು ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನು ಸಾರಿ ಹೇಳುತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಈ ಸಲದ ಯುರೋ ಕಪ್‌ ಅರ್ಹತಾ ಟೂರ್ನಿ. ಈ ತಿಂಗಳಲ್ಲಿ ನಡೆದಿದ್ದ ಲಿಥುವೇನಿಯಾ ವಿರುದ್ಧದ ಎರಡು ಪಂದ್ಯಗಳಲ್ಲೂ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ್ದ ಕ್ರಿಸ್ಟಿಯಾನೊ, ಅಭಿಮಾನಿಗಳನ್ನು ‘ಮಂತ್ರ ಮುಗ್ಧ’ರನ್ನಾಗಿಸಿದ್ದರು.

ವಿಶ್ವ ಶ್ರೇಷ್ಠ ಆಟಗಾರನಿಗೆ ನೀಡುವ ಪ್ರತಿಷ್ಠಿತ ಬ್ಯಾಲನ್‌ ಡಿ ಒರ್‌ ಪ್ರಶಸ್ತಿಯನ್ನು ಐದು ಬಾರಿ ಎತ್ತಿ ಹಿಡಿದಿರುವ ರೊನಾಲ್ಡೊ, ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್‌’ ಗೋಲು ಹೊಡೆದ ಅತೀ ಹಿರಿಯ ಆಟಗಾರ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ. 2018ರ ಫಿಫಾ ವಿಶ್ವಕಪ್‌ನ ಸ್ಪೇನ್‌ ಎದುರಿನ ಪಂದ್ಯದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

ನಾಲ್ಕು ಬಾರಿ ಯುರೋಪಿಯನ್‌ ಚಿನ್ನದ ಬೂಟು ಗೆದ್ದಿರುವ ಈ ತಾರೆ, ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 99 ಗೋಲುಗಳನ್ನು ಗಳಿಸಿರುವ ಅವರು ಇರಾನ್‌ನ ಅಲಿ ದಯೀ (109 ಗೋಲು) ಹೆಸರಿನಲ್ಲಿರುವ ದಾಖಲೆ ಮೀರಿ ನಿಲ್ಲುವ ತವಕದಲ್ಲಿದ್ದಾರೆ.

ಅಂಕಿ ಅಂಶ

  • 2014ರ ಜೂನ್‌ 26ರಂದು ರೊನಾಲ್ಡೊ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಗೋಲುಗಳ ‘ಅರ್ಧಶತಕ’ ಪೂರೈಸಿದ್ದರು.
  • 40 ಇದುವರೆಗೂ ಆಡಿರುವ ಅಂತರರಾಷ್ಟ್ರೀಯ ಪಂದ್ಯಗಳ ಮೊದಲಾರ್ಧದ ಅವಧಿಯಲ್ಲಿ ಗಳಿಸಿದ ಗೋಲುಗಳು
  • 59 ಪಂದ್ಯಗಳ ದ್ವಿತೀಯಾರ್ಧದಲ್ಲಿ ರೊನಾಲ್ಡೊ ಅವರಿಂದ ಮೂಡಿಬಂದ ಗೋಲುಗಳು
  • 11 ಇದುವರೆಗೂ ಪೆನಾಲ್ಟಿಯಲ್ಲಿ ಗಳಿಸಿದ ಒಟ್ಟು ಗೋಲುಗಳು

ನಾಲ್ಕು ವರ್ಷ; 44 ಗೋಲು

  • 2003ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಕ್ರಿಸ್ಟಿಯಾನೊ, ವೃತ್ತಿಬದುಕಿನ ಆರಂಭದ 12 ವರ್ಷಗಳಲ್ಲಿ 55 ಗೋಲುಗಳನ್ನು ಬಾರಿಸಿದ್ದರು.
  • 2016ರ ನಂತರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಕ್ಷರಶಃ ಮೋಡಿ ಮಾಡಿದ್ದರು. ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅವರ ಕಾಲ್ಚಳಕದಲ್ಲಿ 44 ಗೋಲುಗಳು ಅರಳಿರುವುದು ಇದಕ್ಕೆ ಸಾಕ್ಷಿ.
  • ಪೋರ್ಚುಗಲ್‌ ಪರ ಆಡಿರುವ ಹಿಂದಿನ 11 ಪಂದ್ಯಗಳ ಪೈಕಿ ಅವರು 15 ಗೋಲುಗಳನ್ನು ದಾಖಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು