ಶನಿವಾರ, ಸೆಪ್ಟೆಂಬರ್ 25, 2021
29 °C

ಫುಟ್‌ಬಾಲ್‌: ಯಂಗ್‌ ಜೆಮ್ಸ್‌ ತಂಡಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಘಟಿತ ಆಟವಾಡಿದ ಯಂಗ್ ಜೆಮ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಫ್ಎ ಸ್ಪೋರ್ಟಿಂಗ್‌ ಪ್ಲಾನೆಟ್‌ ಟ್ರೋಫಿ ಮಹಿಳಾ ‘ಎ’ ಡಿವಿಷನ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದರು. ಬುಧವಾರ ನಡೆದ ಪಂದ್ಯದಲ್ಲಿ 9–0ಯಿಂದ ಯಂಗ್ ಸ್ಟಾರ್‌ ತಂಡವನ್ನು ಪರಾಭವ
ಗೊಳಿಸಿದರು.

ವಿಜೇತ ತಂಡದ ಪರ ಅಕ್ಷಿತಾ (10ನೇ ಮತ್ತು 35ನೇ ನಿಮಿಷ), ಶ್ರೇಯಾ (16 ಮತ್ತು 40ನೇ ನಿ.), ಆಲಿಯಾ (19 ಮತ್ತು 30+2ನೇ ನಿ.) ತಲಾ ಎರಡು ಗೋಲು ದಾಖಲಿಸಿ ಮಿಂಚಿದರು. ಶ್ರೀ ಶಕ್ತಿ (3ನೇ ನಿ.) ನಾದಿಯಾ ಮಾರ್ಟಿನ್‌ (22ನೇ ನಿ.) ಮತ್ತು ವಸುಧಾ (47ನೇ ನಿ.) ಕೂಡ ಕಾಲ್ಚಳಕ ತೋರಿದರು.

ಮತ್ತೊಂದು ಪಂದ್ಯದಲ್ಲಿ ಯುನೈಟೆಡ್‌ ಎಫ್‌ಸಿ ಕೊಡಗು ತಂಡವು 2–0ಯಿಂದ ಬೆಂಗಳೂರು ಪ್ಯಾಂಥರ್ಸ್ ಎದುರು ಗೆದ್ದಿತು. ಕೊಡಗು ತಂಡದ ನಿಹಾರಿಕಾ (9ನೇ ನಿ.) ಮತ್ತು
ಜಯಶ್ರೀ (19ನೇ ನಿ.) ಗೋಲು ಹೊಡೆದರು.

ಗುರುವಾರ ನಡೆಯುವ ಪಂದ್ಯಗಳಲ್ಲಿ ಬೆಂಗಳೂರು ಬ್ಲೂಸ್‌ ಎಫ್‌ಸಿ– ಜೋಸ್‌ ಯುನೈಟೆಡ್, ಪಯೋನಿಯರ್‌ ವಿಮೆನ್ಸ್ ಮತ್ತು ಪಿಎಎಸ್‌ಎಸ್‌ ನಡುವೆ ಪೈಪೋಟಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು