ಮಡಿಕೇರಿ: ಗೌಡ ಫುಟ್‌ಬಾಲ್ ಅಕಾಡೆಮಿ ವತಿಯಿಂದ ಮಾರ್ಚ್ 8ರಿಂದ 16ರ ವರೆಗೆ 5ನೇ ವರ್ಷದ ‘ಗೌಡ ಫುಟ್‌ಬಾಲ್ ಕಪ್ –2021’ ಆಯೋಜಿಸಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಇಟ್ಟನಿಕೆ ನವನೀತ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೌಡಕುಟುಂಬಗಳ ಕ್ರೀಡಾ ಪಟುಗಳಿಗೆ ಮರಗೋಡಿನ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಮೊದಲು ಬಂದ 64 ತಂಡಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಜೇತ ತಂಡಕ್ಕೆ ₹ 30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಾಹುಮಾನ ಪಡೆದ ತಂಡಕ್ಕೆ ₹ 20 ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ಪಡೆದ ತಂಡಕ್ಕೆ ₹ 10 ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ₹ 5 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ಮಾರ್ಚ್ 1ರಿಂದ ತಂಡದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಹೆಚ್ಚಿನ ತಂಡಗಳು ಆಗಮಿಸಿದ್ದಲ್ಲಿ ದಿನಾಂಕವನ್ನು ವಿಸ್ತರಿಸಲಾಗುವುದು. ಆಸಕ್ತರು ₹ 2 ಸಾವಿರ ಪ್ರವೇಶ ಶುಲ್ಕ ಪಾವತಿಸಿ ತಂಡದ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.

ಹೆಚ್ಚಿನ ಮಾಹಿತಿಗೆ ಪರಿಚನ ವಿಘ್ನೇಶ್-9480404947, ಬಡವಂಡ್ರ ಸುಜಯ್ -9482631474 ಸಂಪರ್ಕಿಸ ಬಹುದು.

ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಶ್ಯಂತ್, ಉಪಾಧ್ಯಕ್ಷ ಬೊಳ್ಳರು ಶಿವ, ಉಪ ಕಾರ್ಯದರ್ಶಿ ಜೈನಿರ ರೋಶನ್, ಖಜಾಂಚಿ ಬಡುವಂಡ ಸುಜಯ್, ನಿರ್ದೇಶಕ ಚೆರಿಯಮನೆ ಚೇತನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.