ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫುಟ್‌ಬಾಲ್‌: ಕಿಕ್‌ಸ್ಟಾರ್ಟ್‌ಗೆ ಸುಲಭ ಗೆಲುವು

Published : 24 ಸೆಪ್ಟೆಂಬರ್ 2024, 15:20 IST
Last Updated : 24 ಸೆಪ್ಟೆಂಬರ್ 2024, 15:20 IST
ಫಾಲೋ ಮಾಡಿ
Comments

ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಕಿಕ್‌ಸ್ಟಾರ್ಟ್‌ ತಂಡವು ಇಲ್ಲಿ ನಡೆಯುತ್ತಿರುವ ಸಿ.ಪುಟ್ಟಯ್ಯ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ ತಂಡವನ್ನು 7–1 ಗೋಲುಗಳಿಂದ ಸುಲಭವಾಗಿ ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಟೂರ್ನಿಯ ಎರಡನೇ ದಿನವಾದ ಮಂಗಳವಾರ ಬಿ ಗುಂಪಿನ ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ಪರ ಆಲ್ಫ್ರೆಡ್ ಲಾಲ್ರೌಟ್ಸಾಂಗ್ (15ನೇ ಮತ್ತು 38ನೇ ನಿಮಿಷ) ಮತ್ತು ಸುಧೀರ್ ಕೋಟಿಕೆಲ (61ನೇ ಮತ್ತು 90+2ನೇ) ಅವರು ತಲಾ ಎರಡು ಗೋಲು ಗಳಿಸಿದರೆ, ಸಿದ್ಧಾರ್ಥ್ ನಾಂಗ್ಮೇಕಪಮ್ (33ನೇ), ಎಡ್ವಿನ್ ರೊಸ್ಸಾರಿಯೊ (80ನೇ), ಪ್ರದೀಪ್‌ ಇ (90ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಎಎಸ್‌ಸಿ ಪರ ಏಕೈಕ ಗೋಲನ್ನು ಟಾಂಗ್ಬ್ರಾಮ್ ಕೃಷ್ಣಕಾಂತ (89ನೇ) ಅವರು ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌ಸಿ ತಂಡವು 3–1 ಗೋಲುಗಳಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವನ್ನು ಮಣಿಸಿತು.

ರೂಟ್ಸ್‌ ಪರ ಮಹಮ್ಮದ್ ಉನೈಸ್ ಎಂ. (23ನೇ), ಬಿ.ಪಿ. ಅಂಕಿತ್‌ (27ನೇ) ಮತ್ತು ಟಿಕ್ಕಂ ಧರಣೇಶ್ವರ ರೆಡ್ಡಿ (45ನೇ) ತಲಾ ಒಂದು ಗೋಲು ಗಳಿಸಿದರು. ಯೂನಿಯನ್‌ನ ತ್ಯಾಂಗಾವ್ ಸ್ಟೀಫನ್ (34ನೇ) ಒಂದು ಗೋಲು ದಾಖಲಿಸಿದರು.

ಸೆ. 25ರ ಪಂದ್ಯಗಳು

ಎಫ್‌ಸಿ ಬೆಂಗಳೂರು ಯುನೈಟೆಡ್‌– ಬೆಂಗಳೂರು ಇಂಡಿಪೆಂಡೆಟ್ಸ್‌ ಎಫ್‌ಸಿ (ಮಧ್ಯಾಹ್ನ 3.30)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT