ಗುರುವಾರ , ಡಿಸೆಂಬರ್ 5, 2019
21 °C

ಫುಟ್‌ಬಾಲ್‌ | ಬ್ರೆಜಿಲ್ ಕೋಚ್‌ಗೆ ‘ಬಾಯಿ ಮುಚ್ಚು’ ಎಂದ ಲಿಯೊನೆಲ್ ಮೆಸ್ಸಿ

Published:
Updated:

ರಿಯಾದ್‌(ಸೌದಿ ಅರೇಬಿಯಾ): ಬ್ರೆಜಿಲ್‌ ಎದುರಿನ ಪಂದ್ಯದ ವೇಳೆ ಆ ತಂಡದ ಮುಖ್ಯ ಕೋಚ್‌ ಜೊತೆ ಮಾತಿನ ಚಕಮಕಿ ನಡಸಿದ ಅರ್ಜೆಂಟಿನಾದ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ, ‘ಬಾಯಿ ಮುಚ್ಚು’ ಎಂಬಂತೆ ಸನ್ಹೆ ಮಾಡಿರುವುದು ಸುದ್ದಿಯಾಗಿದೆ.

ಇಲ್ಲಿನ ಕಿಂಗ್‌ ಸೌದ್‌ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದದಲ್ಲಿ ಅರ್ಜೆಂಟಿನಾ ತಂಡ ಬ್ರೆಜಿಲ್‌ ಎದುರು 1–0 ಅಂತರದ ಜಯ ಸಾಧಿಸಿತು. ಮೂರು ತಿಂಗಳ ನಿಷೇಧ ಶಿಕ್ಷೆ ಬಳಿಕ ತಂಡಕ್ಕೆ ಮರಳಿರುವ ಮೆಸ್ಸಿ, ಪಂದ್ಯದಲ್ಲಿ ದಾಖಲಾದ ಏಕೈಕ ಗೋಲು ಬಾರಿಸಿ ಸಂಭ್ರಮಿಸಿದರು.

ಪಂದ್ಯದ ವೇಳೆ ನಡೆದ ಮಾತಿನ ಚಕಮಕಿ ಸಂಬಂಧ ಪ್ರತಿಕ್ರಿಯಿಸಿರುವ ಟೈಟ್‌, ‘ಪಂದ್ಯದ ಮೊದಲಾರ್ಧದ ವೇಳೆ ಮೆಸ್ಸಿಗೆ ಹಳದಿ ಕಾರ್ಡ್‌ ನೀಡುವಂತೆ ರೆಫ್ರಿಗೆ ದೂರು ನೀಡಿದೆ. ಏಕೆಂದರೆ ಆತ(ಮೆಸ್ಸಿ) ನನಗೆ ಬಾಯಿ ಮುಚ್ಚು ಎಂದು ಹೇಳಿದ. ನಾನೂ, ನೀನು ಬಾಯಿ ಮುಚ್ಚು ಎಂದೆ. ಅಷ್ಟೇ ನಡೆದದ್ದು’ ಎಂದಿದ್ದಾರೆ.

ಇದನ್ನೂ ಓದಿ: ಫುಟ್‌ಬಾಲ್‌ ಕಾನ್ಫೆಡರೇಷನ್‌ ವಿರುದ್ಧ ಸಿಡಿಮಿಡಿ: ಮೆಸ್ಸಿಗೆ 3 ತಿಂಗಳ ನಿಷೇಧ

ಜುಲೈನಲ್ಲಿ ನಡೆದಿದ್ದ ಕೊಪಾ ಅಮೆರಿಕ ಟೂರ್ನಿಯ ಸಂದರ್ಭ ಮೆಸ್ಸಿ, ದಕ್ಷಿಣ ಅಮೆರಿಕ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಕಾನ್‌ಮೆಬಾಲ್‌) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಹಾಗಾಗಿ ರಾಷ್ಟ್ರೀಯ ತಂಡದ ಪರವಾಗಿ ಮೂರು ತಿಂಗಳ ಕಾಲ ಆಡದಂತೆ ನಿಷೇಧ ಹೇರಿದ್ದ ಕಾನ್‌ಮೆಬಾಲ್‌ ₹ 34.50 ಲಕ್ಷ (50 ಸಾವಿರ ಡಾಲರ್‌) ದಂಡವನ್ನೂ ವಿಧಿಸಿತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು