ಬುಧವಾರ, ಆಗಸ್ಟ್ 10, 2022
21 °C

ಫುಟ್‌ಬಾಲ್ ಆಟಗಾರ ಯತಿರಾಜ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಫುಟ್‌ಬಾಲ್ ತಂಡದಲ್ಲಿ ಆಡಿದ್ದ ಕರ್ನಾಟಕದ ಧರ್ಮಲಿಂಗಮ್‌ ಯತಿರಾಜ್ (89) ಅವರು ಶುಕ್ರವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.

1962ರಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಆಡಿದ ಭಾರತ ತಂಡದಲ್ಲಿ ಅವರು ಇದ್ದರು. ಆ ಕ್ರೀಡಾಕೂಟದಲ್ಲಿ ತಂಡವು ಚಿನ್ನದ ಪದಕ ಗೆದ್ದಿತ್ತು. ಕರ್ನಾಟಕ ತಂಡದ ಪರ ಸಂತೋಷ್ ಟ್ರೋಫಿ ಫುಟ್‌ಬಾಲ್‌ ಟೂರ್ನಿ,  ಡುರಾಂಡ್‌ ಕಪ್‌, ರೋವರ್ಸ್ ಕಪ್‌ ಹಾಗೂ ಸ್ಟಾಫರ್ಡ್‌ ಕಪ್‌ ಟೂರ್ನಿಗಳಲ್ಲಿ ಆಡಿದ್ದರು.

ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು (ಕೆಎಸ್‌ಎಫ್‌ಎ) ಅವರಿಗೆ ಗೌರವ ಆಜೀವ ಸದಸ್ಯತ್ವ ನೀಡಿತ್ತು. ರಾಜ್ಯ ತಂಡಕ್ಕೆ ಆಯ್ಕೆಗಾರ ಹಾಗೂ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು