ಬೆಂಗಳೂರು: ಮೊಹಮ್ಮದ್ ರೆಹಾನ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಅಗರಂ ಎಫ್ಸಿ ತಂಡ ಬಿಡಿಎಫ್ಎ ಆಶ್ರಯದ ‘ಸಿ’ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಭಾನುವಾರ ಭರ್ಜರಿ ಜಯ ಸಾಧಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಸವನಗುಡಿ ಎಫ್ಸಿ ಎದುರು ಅಗರಂ 9–0ಯಿಂದ ಗೆದ್ದಿತು. ರೆಹಾನ್ 6, 29 ಮತ್ತು 33ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಅರ್ನಾಲ್ಡ್ ಕಾರ್ಮೆಲ್ರಾಜ್ (13ನೇ ನಿಮಿಷ), ಮಧಾಂಶ್ (15ನೇ ನಿ), ತರುಣ್ (16ನೇ ನಿ), ರೋಹಿತ್ ಎಸ್ (45, 57ನೇ ನಿ), ಈಶ್ವರ್ (58ನೇ ನಿ) ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಚಿನ್ನಪ್ಪ ಗಾರ್ಡನ್ ತಂಡ 1–0ಯಿಂದ ಹೊಸಕೋಟ ಎಫ್ಸಿಯನ್ನು ಸೋಲಿಸಿತು. ಜೂಡ್ ಡಿ ಸೋಜಾ (58ನೇ ನಿ) ಪಂದ್ಯದ ಏಕೈಕ ಗೋಲು ಗಳಿಸಿದರು. ಬೆಂಗಳೂರು ರೆಡ್ಸ್ ಮತ್ತು ಎಕ್ಸೆಲ್ಸಿಯರ್ ನಡುವಿನ ಪಂದ್ಯ 1–1ರಲ್ಲಿ ಡ್ರಾ ಆಯಿತು. ರೆಡ್ಸ್ ಪರ ಧನುಷ್ (17ನೇ ನಿ) ಮತ್ತು ಎಕ್ಸೆಲ್ಸಿಯರ್ ಪರ ರಯೀಸ್ ಅಹಮ್ಮದ್ (37ನೇ ನಿ) ಚೆಂಡನ್ನು ಗುರಿ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.