ಮಂಗಳವಾರ, ಮೇ 11, 2021
19 °C
ಬಿಡಿಎಫ್‌ಎ ಬಿ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌

ಫುಟ್‌ಬಾಲ್ ಲೀಗ್: ಫ್ರೆಂಡ್ಸ್ ಯುನೈಟೆಡ್‌ಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಮೋಘ ಆಟವಾಡಿದ ಫ್ರೆಂಡ್ಸ್ ಯುನೈಟೆಡ್‌ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎ ಗುಂಪಿನ ಹಣಾಹಣಿಯಲ್ಲಿ 11–0ರಿಂದ ವೆಹಿಕಲ್ಸ್ ಎಫ್‌ಸಿ ಎದುರು ಗೆದ್ದಿತು.

ವಿಜೇತ ಫ್ರೆಂಡ್ಸ್ ಯುನೈಟೆಡ್‌ ಪ‍ರ ಶಿವಕರ್‌ (6 ಹಾಗೂ 44ನೇ ನಿಮಿಷ), ಅಜಿತ್ ಕುಮಾರ್‌ (22ನೇ ನಿಮಿಷ), ಧನಿಶ್ ಕುಮಾರ್ (28, 31ನೇ ನಿ.), ಕಿರಣ್ ಕುಮಾರ್ (35+3ನೇ ನಿ.), ಆ್ಯಂಟನಿ ಡಿಸೋಜಾ (46, 58ನೇ ನಿ.), ಕಾರ್ತಿಕ್‌ ಕೆ. (66ನೇ ನಿ.), ಡಾನ್ ಬಾಸ್ಕೊ (69ನೇ ನಿ.) ಹಾಗೂ ಡೆಂಜಿಲ್‌ (70+2ನೇ ನಿ.) ಗೋಲು ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಸೌತ್ ಇಂಡಿಯಾ ಎಫ್‌ಸಿ 3–0ಯಿಂದ ಮಹಮ್ಮಡನ್ ಸ್ಪೋರ್ಟಿಂಗ್ ಎದುರು ಜಯ ಸಾಧಿಸಿತು. ಸೌತ್ ಇಂಡಿಯಾ ತಂಡದ ದೇವೇಂದ್ರನ್‌ ರಾಜ (7ನೇ ನಿ.), ಮುತ್ತು ಕುಮಾರ್ (20ನೇ ನಿ.) ಹಾಗೂ ಯುವವೇಂದ್ರ (37ನೇ ನಿ.) ಕಾಲ್ಚಳಕ ತೋರಿದರು.

ಇನ್ನೊಂದು ಪಂದ್ಯದಲ್ಲಿ ರೆಬೆಲ್ಸ್ ಎಫ್‌ಸಿ 6–0ಯಿಂದ ಆರ್‌.ಎಸ್‌.ಸ್ಪೋರ್ಟ್ಸ್ ಎಫ್‌ಸಿಯನ್ನು ಮಣಿಸಿತು. ಗೆದ್ದ ತಂಡದ ಪರ ಸಂದೇಶ್ ಕಾಸರ್ (14 ಹಾಗೂ 61ನೇ ನಿ.), ಪುಲಕ್ ಬರುವಾ (35 ಹಾಗೂ 70ನೇ ನಿ.), ಇಜಾಕಿಲ್ ಅಡೆಜೊ ಡೇನಿಯಲ್‌ (19ನೇ ನಿ.) ಹಾಗೂ ಮೆಬಾಂತಿಕುಪರ್‌ ಮೈಲಿಮನ್‌ಗಪ್‌ (46ನೇ ನಿ.) ಗೋಲು ಹೊಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು