ಮಡಗಾಂವ್, ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಎರಡನೇ ಲೆಗ್ನ ವೇಳಾಪಟ್ಟಿ ಶನಿವಾರ ಬಿಡುಗಡೆಗೊಂಡಿದ್ದು ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಮೊದಲ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎದುರು ಸೆಣಸಲಿದೆ.

ಮೊದಲ ಲೆಗ್ನ ಪಂದ್ಯಗಳು ಜನವರಿ 11ರಂದು ಮುಕ್ತಾಯಗೊಳ್ಳಲಿವೆ. 12ರಂದು ಬಿಎಫ್ಸಿ ಮತ್ತು ನಾರ್ತ್ ಈಸ್ಟ್ ನಡುವಿನ ಪಂದ್ಯ ತಿಲಕ್ ಮೈದಾನದಲ್ಲಿ ನಡೆಯಲಿದೆ. ಬಹುನಿರೀಕ್ಷಿತ ಎರಡನೇ ಕೋಲ್ಕತ್ತ ಡರ್ಬಿಯಾದ ಎಟಿಕೆ ಮೋಹನ್ ಬಾಗನ್ ಮತ್ತು ಎಸ್ಸಿ ಈಸ್ಟ್ ಬೆಂಗಾಲ್ ನಡುವಿನ ಪಂದ್ಯ ಫೆಬ್ರುವರಿ 19ರಂದು ನಡೆಯಲಿದೆ. ಫೆಬ್ರುವರಿ 28ರಂದು ಎರಡನೇ ಲೆಗ್ನ ಪಂದ್ಯಗಳು ಕೊನೆಗೊಳ್ಳಲಿದ್ದು ಅಂತಿಮ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ಮುಂಬೈ ಸಿಟಿ ಎಫ್ಸಿ ನಡುವೆ ಹಣಾಹಣಿ ನಡೆಯಲಿದೆ. ಭಾನುವಾರಗಳಲ್ಲಿ ಎರಡು ಪಂದ್ಯಗಳು ನಡೆಯಲಿದ್ದು ಒಟ್ಟು ಏಳು ‘ಡಬಲ್ ಹೆಡರ್’ ಇರುತ್ತದೆ.

ಪ್ಲೇ ಆಫ್ ಮತ್ತು ಫೈನಲ್ ಪಂದ್ಯದ ವೇಳಾಪಟ್ಟಿಯನ್ನು ತಡವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಎರಡನೇ ಲೆಗ್ನಲ್ಲಿ ಬಿಎಫ್ಸಿ ಪಂದ್ಯಗಳು

ದಿನಾಂಕ; ಎದುರಾಳಿ
ಜ.12; ನಾರ್ತ್ ಈಸ್ಟ್ ಯುನೈಟೆಡ್
ಜ.20; ಕೇರಳ ಬ್ಲಾಸ್ಟರ್ಸ್
ಜ.24; ಒಡಿಶಾ ಎಫ್ಸಿ
ಜ.28; ಹೈದರಾಬಾದ್ ಎಫ್ಸಿ
ಫೆ.2; ಈಸ್ಟ್ ಬೆಂಗಾಲ್
ಫೆ.5; ಚೆನ್ನೈಯಿನ್ ಎಫ್ಸಿ
ಫೆ.9; ಎಟಿಕೆಎಂಬಿ
ಫೆ.15; ಮುಂಬೈ ಸಿಟಿ
ಫೆ.21; ಎಫ್ಸಿ ಗೋವಾ
ಫೆ.25; ಜೆಮ್ಶೆಡ್ಪುರ ಎಫ್ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.