ಗುರುವಾರ , ಅಕ್ಟೋಬರ್ 17, 2019
26 °C

ಎಫ್‌ಎಸ್‌ಡಿಎಲ್‌ಗೆ ಮಾರ್ಟಿನ್ ಸಿಇಒ

Published:
Updated:
Prajavani

ಮುಂಬೈ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಆಯೋಜಕರಾದ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಸಂಸ್ಥೆ ಸ್ಕಾಟ್ಲೆಂಡ್‌ನ ಮಾರ್ಟಿನ್ ಬೇನ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕ ಮಾಡಿದೆ.

ಫುಟ್‌ಬಾಲ್ ಕ್ರೀಡೆಯಲ್ಲಿ 25 ವರ್ಷಗಳಿಂದ ತೊಡಗಿರುವ ಮಾರ್ಟಿನ್ ವಿಶ್ವದ ವಿವಿಧ ಫುಟ್‌ಬಾಲ್ ಲೀಗ್‌ಗಳಲ್ಲಿ ಮತ್ತು ಕ್ಲಬ್‌ಗಳಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಸ್ಕಾಟಿಷ್ ಪ್ರೀಮಿಯರ್ ಲೀಗ್‌ನಲ್ಲಿ 3 ವರ್ಷ ನಿರ್ದೇಶಕರಾಗಿದ್ದ ಅವರು ತಾಯ್ನಾಡಿನ ಕ್ಲಬ್‌ ರೇಂಜರ್ಸ್ ಎಫ್‌ಸಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Post Comments (+)