ಶನಿವಾರ, ಏಪ್ರಿಲ್ 4, 2020
19 °C

ಗೋವಾದಲ್ಲಿ ಐಎಸ್‌ಎಲ್‌ ಫೈನಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯ ಫೈನಲ್‌ ಪಂದ್ಯವು ಗೋವಾದಲ್ಲಿ ನಡೆಯಲಿದೆ. ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ನ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರು ಭಾನುವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ.

‘ಗೋವಾದಲ್ಲಿ ಫುಟ್‌ಬಾಲ್‌ ಪ್ರೇಮಿಗಳು ಹೆಚ್ಚಿದ್ದಾರೆ. ಹೀಗಾಗಿ ಆ ರಾಜ್ಯಕ್ಕೆ ಐಎಸ್‌ಎಲ್‌ ಫೈನಲ್‌ನ ಆತಿಥ್ಯದ ಜವಾಬ್ದಾರಿ ನೀಡಲಾಗಿದೆ. ಮಾರ್ಚ್‌ 14ರಂದು ರಾತ್ರಿ 7.30ಕ್ಕೆ ಪಂದ್ಯ ನಡೆಯಲಿದೆ’ ಎಂದು ನೀತಾ ತಿಳಿಸಿದ್ದಾರೆ.

2015ರಲ್ಲಿ ಗೋವಾದ ಫತೋರ್ಡ ಕ್ರೀಡಾಂಗಣದಲ್ಲಿ ಐಎಸ್‌ಎಲ್‌ ಫೈನಲ್‌ ನಡೆದಿತ್ತು. ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಚೆನ್ನೈಯಿನ್‌ ಎಫ್‌ಸಿ ತಂಡ 3–2 ಗೋಲುಗಳಿಂದ ಆತಿಥೇಯ ಗೋವಾ ತಂಡವನ್ನು ಪರಾಭವಗೊಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು