ಶುಕ್ರವಾರ, ಫೆಬ್ರವರಿ 21, 2020
18 °C
ಫೈನಲ್‌ನಲ್ಲಿ ಕ್ರಿಪ್ಶಾ ತಂಡಕ್ಕೆ ನಿರಾಸೆ

ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌: ಗೋಕುಲಂ ಕೇರಳ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಿದ್ದಾಜಿದ್ದಿ ಪೈಪೋಟಿ ಕಂಡ ಫೈನಲ್‌ ಹಣಾಹಣಿಯಲ್ಲಿ ಗೋಕುಲಂ ಕೇರಳ ತಂಡ, ಕಂಚುಪ್‌ ರೋಡ್‌ ಯಂಗ್‌ ಫಿಸಿಕಲ್‌ ಆ್ಯಂಡ್‌ ಸ್ಪೋರ್ಟ್ಸ್ (ಕ್ರಿಪ್ಶಾ ಎಫ್‌ಸಿ) ತಂಡವನ್ನು 3–2ರಿಂದ ಮಣಿಸಿತು. ಇದರೊಂದಿಗೆ ರಾಷ್ಟ್ರೀಯ ಮಹಿಳಾ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಕ್ರವಾರ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ರಾಜ್ಯ ಫುಟ್‌ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇರೋಮ್‌ ಪ್ರಮೇಶ್ವರಿ ದೇವಿ (1ನೇ ನಿಮಿಷ) ಹಾಗೂ ಕಮಲಾ ದೇವಿ (25ನೇ ನಿಮಿಷ) ಗೋಲು ಕಾಲ್ಚಳಕ ತೋರುವ ಮೂಲಕ ಗೋಕುಲಂ ಕೇರಳ ತಂಡಕ್ಕೆ ಆರಂಭದಲ್ಲೇ ಮುನ್ನಡೆ ಒದಗಿಸಿದರು.

ಆದರೆ ಡಂಗ್ಮೆ ಗ್ರೇಸ್‌ (34ನೇ ನಿಮಿಷ) ಹಾಗೂ ರತನ್‌ ಬಾಲಾದೇವಿ (72ನೇ ನಿಮಿಷ) ಗೋಲು ದಾಖಲಿಸಿ ಸಮಬಲ ಸಾಧಿಸಿದರು. ಕೇರಳ ತಂಡದ ಸಬಿತ್ರಾ ಭಂಡಾರಿ ಪಂದ್ಯದ ಕೊನೆಯ ಹಂತದಲ್ಲಿ (87ನೇ ನಿಮಿಷ) ಗೋಲು ಹೊಡೆದು ತಂಡದ ಗೆಲುವಿನ ಸಂಭ್ರಮಕ್ಕೆ ಕಾರಣವಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು