ಗುರುವಾರ , ಅಕ್ಟೋಬರ್ 21, 2021
21 °C
ಫೋಬ್ಸ್‌ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ ಬಿಡುಗಡೆ; ಪೋರ್ಚುಗಲ್ ತಾರೆ ನಂ 1 ಫುಟ್‌ಬಾಲ್ ಆಟಗಾರ

ಮೆಸ್ಸಿ ಹಿಂದಿಕ್ಕಿದ ಕ್ರಿಸ್ಟಿಯಾನೊ ರೊನಾಲ್ಡೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು (ರಾಯಿಟರ್ಸ್): ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಫಾರ್ವರ್ಡ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಫೋರ್ಬ್ಸ್‌ ನಿಯತಕಾಲಿಕೆಯು ಬಿಡುಗಡೆ ಮಾಡಿರುವ ಶ್ರೀಮಂತ ಕ್ರೀಡಾಪಟುಗಳಲ್ಲಿ ಅತಿ ಹೆಚ್ಚುಆದಾಯ ಪಡೆಯುವ ಫುಟ್‌ಬಾಲ್ ತಾರೆಯಾಗಿದ್ದಾರೆ.

ಪೋರ್ಚುಗಲ್‌ನ ರೊನಾಲ್ಡೊ ಅವರು  ಅರ್ಜೆಂಟಿನಾದ ತಾರೆ ಲಯೊನೆಲ್‌ ಮೆಸ್ಸಿಯನ್ನು ಹಿಂದಿಕ್ಕಿ ಪ್ರಥಮ ಸ್ಥಾನಕ್ಕೇರಿದ್ದಾರೆ.

ಹೋದ ಆಗಸ್ಟ್‌ನಲ್ಲಿ ರೊನಾಲ್ಡೊ ಯುವೆಂಟಿಸ್‌ನಿಂದ ಯುನೈಟೆಡ್ ತಂಡಕ್ಕೆ ಮರಳಿದ್ದರು. ಈಚೆಗೆ ಮೆಸ್ಸಿ ಕೂಡ ತಾವು ಬಹುಕಾಲ ಪ್ರತಿನಿಧಿಸಿದ್ದ ಬಾರ್ಸಿಲೋನಾ ಕ್ಲಬ್ ತೊರೆದು ಪ್ಯಾರಿಸ್ ಸೇಂಟ್ ಜರ್ಮೇನ್ (ಪಿಎಸ್‌ಜಿ) ತಂಡ ಸೇರಿದ್ದರು.

‘ರೊನಾಲ್ಡೊ ವಿಶ್ವದ ಅತ್ಯಂತ ಜನಪ್ರಿಯ ಫುಟ್‌ಬಾಲ್ ತಾರೆಯಾಗಿದ್ದಾರೆ. ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್‌ಗಳಲ್ಲಿ ಅವರಿಗೆ 50 ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ. 2021–22ರ  ಋತುವಿನಲ್ಲಿ ಅವರು ₹ 942 ಕೋಟಿ (ತೆರಿಗೆ ಕಡಿತಕ್ಕೂ ಮುನ್ನ)  ಆದಾಯ ಗಳಿಸಿದ್ದಾರೆ. ಅದರಲ್ಲಿ ಯುನೈಟೆಡ್ ತಂಡದಿಂದ ಪಡೆದ ಸುಮಾರು ₹ 500 ಕೋಟಿ ಮೊತ್ತದ ವೇತನ ಮತ್ತು ಬೋನಸ್‌ಗಳೂ ಸೇರಿವೆ. ಉಳಿದಂತೆ ನೈಕಿ, ಹರ್ಬ್‌ಲೈಫ್, ಕ್ಲಿಯರ್ ಮತ್ತು ತಮ್ಮದೇ ಬ್ರ್ಯಾಂಡ್ ಸಿಆರ್‌7 ಒಪ್ಪಂದಗಳಿಂದ ಬರುವ ಆದಾಯವೂ ಇದರಲ್ಲಿದೆ’ ಎಂದು ಫೋರ್ಬ್ಸ್‌ ಹೇಳಿದೆ. 

ಪಿಎಸ್‌ಜಿಯಲ್ಲಿ ಮೆಸ್ಸಿ ಜೊತೆಗೆ ಆಡುವ ನೇಯ್ಮರ್, ಕೈಲಿಯನ್ ಎಂಬಾಪೆ ಕೂಡ ಅಗ್ರ ಐವರು ಶ್ರೀಮಂತ ಫುಟ್‌ಬಾಲ್ ಆಟಗಾರರ ಪಟ್ಟಿಯಲ್ಲಿದ್ದಾರೆ.

ಆದಾಯ (₹ ಕೋಟಿಗಳಲ್ಲಿ)

ಕ್ರಿಸ್ಟಿಯಾನೊ ರೊನಾಲ್ಡೊ;  942

ಲಯೊನೆಲ್ ಮೆಸ್ಸಿ; 811

ನೇಯ್ಮರ್; 700

ಕೈಲಿಯನ್ ಎಂಬಾಪೆ; 316

ಮೊಹಮ್ಮದ್ ಸಲಾಹ; 302

ರಾಬರ್ಟ್‌ ಲೆವಾಂಡೊಸ್ಕಿ; 258

ಆ್ಯಂಡ್ರೆಸ್ ಐನಿಸ್ಟಾ; 258

ಪಾಲ್ ಪೊಗ್ಬಾ; 250

ಗೆರೆತ್ ಬೆಲ್; 235

ಈಡನ್ ಹಜಾರ್ಡ್; 213

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು