ಬುಧವಾರ, ಅಕ್ಟೋಬರ್ 23, 2019
21 °C
ಸ್ಯಾಫ್‌ 15 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿ

ಹಿಮಾಂಶು ಹ್ಯಾಟ್ರಿಕ್‌ಗೆ ಒಲಿದ ಜಯ

Published:
Updated:

ಕಲ್ಯಾಣಿ, ಪಶ್ಚಿಮ ಬಂಗಾಳ: ಹಿಮಾಂಶು ಜಾಂಗ್ರಾ ಹ್ಯಾಟ್ರಿಕ್‌ ಗೋಲು ಬಾರಿಸಿದರು. ಅವರ ಆಟದ ಬಲದಿಂದ ಸ್ಯಾಫ್‌ 15 ವರ್ಷದೊಳಗಿನವರ ಟೂರ್ನಿಯಲ್ಲಿ ಭಾರತ ಫುಟ್‌ಬಾಲ್‌ ತಂಡ ಶ್ರೀಲಂಕಾವನ್ನು5–0 ಅಂತರದಿಂದ ಮಣಿಸಿತು.

ಹಿಮಾಂಶು ಹೊರತುಪಡಿಸಿ ಮಹೇಸನ್‌ ಮತ್ತು ಶುಭೊ ಪಾಲ್‌ ತಲಾ ಒಂದು ಗೋಲು ಬಾರಿಸಿ ಮಿಂಚಿದರು.

ಭಾರತ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. ಮಿಡ್‌ಫೀಲ್ಡರ್‌ ಮಹೇಸನ್‌ ಅವರು ಹಿಮಾಂಶು ಅವರಿಗೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟು ಗೋಲು ಗಳಿಕೆಗೆ ನೆರವಾದರು.

ಹಿಮಾಂಶು ಮೊದಲ ಗೋಲು ದಾಖಲಿಸುವ ಮೂಲಕ ಖಾತೆ ತೆರೆದರು. ಇದಾದ ಕೆಲವೇ ನಿಮಿಷಗಳಲ್ಲಿ ಮಹೇಸನ್‌ ಭಾರತದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಲಂಕಾ ಗೋಲ್‌ಕೀಪರ್‌ರನ್ನು ವಂಚಿಸಿದ ಹಿಮಾಂಶು ಮತ್ತೊಂದು ಯಶಸ್ಸು ಕಂಡರು.

ಪ್ರಥಮಾರ್ಧದ ಇಂಜುರಿ ಟೈಮ್‌ನಲ್ಲಿ ಶುಭೊ ಪಾಲ್‌ ಮೂಲಕ ಮತ್ತೊಂದು ಗೋಲು ಬಂತು. ದ್ವಿತೀಯಾರ್ಧದಲ್ಲಿ ಹ್ಯಾಟ್ರಿಕ್‌ ಸಾಧಿಸಿದ ಹಿಮಾಂಶು ಭಾರತದ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಗುರುವಾರ ಭಾರತ ತಂಡ ಬಾಂಗ್ಲಾವನ್ನು ಎದುರಿಸಲಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)