ಶನಿವಾರ, ಜನವರಿ 18, 2020
18 °C

ಇಂಡಿಯನ್‌ ಸೂಪರ್‌ ಲೀಗ್‌: ಹೈದರಾಬಾದ್‌ ಎಫ್‌ಸಿ ತೊರೆದ ಬ್ರೌನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಇಂಡಿಯನ್‌ ಸೂಪರ್‌ ಲೀಗ್‌ ಫ್ರಾಂಚೈಸ್‌ ಹೈದರಾಬಾದ್‌ ಎಫ್‌ಸಿ ಮುಖ್ಯ ಕೋಚ್‌ ಹುದ್ದೆಯನ್ನು ಫಿಲ್‌ ಬ್ರೌನ್‌ ತೊರೆದಿದ್ದಾರೆ. ಶನಿವಾರ, ಕ್ಲಬ್‌ ಒಪ್ಪಿಗೆ ಪಡೆದ ನಂತರ ಬ್ರೌನ್‌ ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಋತುವಿನ ಆರಂಭದಲ್ಲಿ ಅವರು ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು. 

‘ಕ್ಲಬ್‌ಗೆ ಸೇರ್ಪಡೆಯಾದ ನಂತರ ಫಿಲ್‌ ಅವರು ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ನಮ್ಮ ಪದಾರ್ಪಣೆ ಋತುವಿನಲ್ಲಿ ಸವಾಲಿನ ಸಂದರ್ಭಗಳು ಎದುರಾದವು. ಫಿಲ್‌ ಮೆಚ್ಚುಗೆಯಾಗುವ ರೀತಿ ತಂಡವನ್ನು ಮುನ್ನಡೆಸಿದರು. ಅವರಿಗೆ ಶುಭ ಹಾರೈಸುತ್ತೇವೆ’ ಎಂದು ಹೈದರಾಬಾದ್ ಎಫ್‌ಸಿ ಸಹ ಮಾಲೀಕರಾದ ವರುಣ್‌ ತ್ರಿಪುರನೇನಿ ತಿಳಿಸಿದರು.

ಹೈದರಾಬಾದ್‌ ಎಫ್‌ಸಿ ತಂಡ ಸದ್ಯ 10 ತಂಡಗಳ ಲೀಗ್‌ನಲ್ಲಿ ತಳದಲ್ಲಿದೆ. 12 ಪಂದ್ಯಗಳಲ್ಲಿ ಒಂಬತ್ತನ್ನು ಸೋತಿದ್ದು, ಒಂದು ಗೆದ್ದು, ಎರಡನ್ನು ಡ್ರಾ ಮಾಡಿಕೊಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು