ಶನಿವಾರ, ಸೆಪ್ಟೆಂಬರ್ 26, 2020
27 °C

ಫುಟ್‌ಬಾಲ್: ಹೈದರಾಬಾದ್‌ ಎಫ್‌ಸಿ ಜೊತೆ ಚಿಂಗ್ಲೆನ್ಸನಾ ಸಿಂಗ್‌ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಇಂಡಿಯನ್ ಸೂಪರ್‌ ಲೀಗ್‌ ತಂಡ ಹೈದರಾಬಾದ್‌ ಎಫ್‌ಸಿ ಪರ ಆಡಲು ಡಿಫೆಂಡರ್‌‌ ಕೊನ್ಶಾಮ್‌ ಚಿಂಗ್ಲೆಸನಾ ಸಿಂಗ್‌ ಅವರು ಸಹಿ ಹಾಕಿದ್ದಾರೆ. ಟೂರ್ನಿಯ ಮುಂದಿನ ಎರಡು ಆವೃತ್ತಿಗಳಲ್ಲಿ ಅವರು ಹೈದರಾಬಾದ್‌ ‍‍ಪರ ಆಡಲಿದ್ದಾರೆ.

ಫುಟ್‌ಬಾಲ್‌ ವಲಯದಲ್ಲಿ ‘ಸನಾ’ ಎಂದೇ ಕರೆಯಲಾಗುವ ಮಣಿಪುರದ ಈ ಆಟಗಾರ ಎಫ್‌ಸಿ ಗೋವಾ ‍ಪರ ಮೂರು ವರ್ಷಗಳ ಕಾಲ ಆಡಿದ್ದಾರೆ.

‘ಹೈದರಾಬಾದ್‌ ಎಫ್‌ಸಿ ಸಾಕಷ್ಟು ಮಹತ್ವಾಕಾಂಕ್ಷೆಯೊಂದಿಗೆ ಹೊಸ ತಂಡವನ್ನು ಕಟ್ಟುತ್ತಿದೆ. ಇದರ ಭಾಗವಾಗಲು ನಾನು ಬಯಸುತ್ತೇನೆ. ಟ್ರೋಫಿಗಳನ್ನು ಗೆಲ್ಲಿಸಿಕೊಡುವುದರ ಮೂಲಕ ಭಾರತದ ಫುಟ್‌ಬಾಲ್‌ನಲ್ಲಿ ಕ್ಲಬ್‌ನ ವೈಭವವನ್ನು ಮರುಸ್ಥಾಪಿಸಲು ನೆರವಾಗುತ್ತೇನೆ‘ ಎಂದು ಚಿಂಗ್ಲೆನ್ಸನಾ ಸಿಂಗ್ ಹೇಳಿದ್ದಾರೆ.

ಈ ಋತುವಿನಲ್ಲಿ ಹೈದರಾಬಾದ್‌ ಎಫ್‌ಸಿ ಪರ ಸಹಿ ಹಾಕಿದ ಭಾರತದ ಮೂರನೇ ಆಟಗಾರ ಚಿಂಗ್ಲೆನ್ಸನಾ. ಈ ಹಿಂದೆ ಸುಬ್ರತಾ ಪಾಲ್‌ ಹಾಗೂ ಹಲೀಚರಣ್‌ ನಾರ್ಜರಿ ಅವರು ಈ ಕ್ಲಬ್‌ ಸೇರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು