‘ಫ್ರಾನ್ಸ್‌ ತಂಡಕ್ಕೆ ನನ್ನ ಬೆಂಬಲ’

7
ಮಹೇಂದ್ರ ಸಿಂಗ್‌ ದೋನಿ ಉತ್ತಮ ಫುಟ್‌ಬಾಲ್‌ ಆಟಗಾರ: ಯುವರಾಜ್

‘ಫ್ರಾನ್ಸ್‌ ತಂಡಕ್ಕೆ ನನ್ನ ಬೆಂಬಲ’

Published:
Updated:

ನವದೆಹಲಿ: ‘ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ನಾನು ಫ್ರಾನ್ಸ್‌ ತಂಡಕ್ಕೆ ಬೆಂಬಲ ನೀಡುತ್ತಿದ್ದೇನೆ. ಇದಕ್ಕೆ ಕಾರಣ ಆ ತಂಡದಲ್ಲಿನ ಆಟಗಾರ ಪೌಲ್‌ ಪೋಗ್ಬಾ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹೇಳಿದ್ದಾರೆ. 

ಸ್ಪೋರ್ಟ್ಸ್‌ ಸ್ಕ್ರೀನ್‌ ಇಂಡಿಯಾ ಎಂಬ ಸಾಮಾಜಿಕ ಜಾಲತಾಣದೊಂದಿಗೆ ಮಾತನಾಡಿರುವ ಅವರು, ‘ಹಿಂದಿನ ವಿಶ್ವಕಪ್‌ಗಳಲ್ಲಿ ಬ್ರೆಜಿಲ್‌ ತಂಡಕ್ಕೆ ಬೆಂಬಲಿಸಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಶ್ರೇಷ್ಠ ಆಟಗಾರನಾಗಿ ರೂಪುಗೊಳ್ಳುತ್ತಿರುವ ಪೌಲ್‌ ಪೋಗ್ಬಾ ಅವರಿಗಾಗಿ ಈ ಬಾರಿ ಫ್ರಾನ್ಸ್‌ ತಂಡ ನನಗೆ ಅಚ್ಚು–ಮೆಚ್ಚು’ ಎಂದು ಅಭಿಪ್ರಾಯಪಟ್ಟಿದ್ದಾರೆ. 

‘ಪೌಲ್‌ ಅವರು ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಭರವಸೆಯ ಆಟಗಾರ. ಚೆಂಡಿನ ಮೇಲೆ ಅವರು ಹೊಂದಿರುವ ಹಿಡಿತ, ಡ್ರಿಬ್ಲಿಂಗ್‌ ಕೌಶಲ ನನಗೆ ಇಷ್ಟ. ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನಲ್ಲಿ ಆಡುವ ಅವರು ಕಳೆದೆರೆಡು ಋತುವಿನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ. 

ಭಾರತ ಕ್ರಿಕೆಟ್‌ ತಂಡದ ಆಟಗಾರರು ಅಭ್ಯಾಸದ ವೇಳೆ ಫುಟ್‌ಬಾಲ್‌ ಆಡುವುದನ್ನು ಇದೇ ವೇಳೆ ಅವರು ನೆನಪಿಸಿಕೊಂಡಿದ್ದಾರೆ. 

‘ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ತುಂಬ ಫಿಟ್‌ ಆಗಿದ್ದಾರೆ. ಎಷ್ಟು ಹೊತ್ತು ಬೇಕಾದರೂ  ಅಂಗಳದಲ್ಲಿ ಓಡುವ ಸಾಮರ್ಥ್ಯ ಅವರಲ್ಲಿದೆ. ಆದರೆ, ಅವರು ಗೋಲು ಗಳಿಸುವ ಕೌಶಲ ಹೊಂದಿಲ್ಲ. ಈ ನಿಟ್ಟಿನಲ್ಲಿ ಅವರು ಅಭ್ಯಾಸ ನಡೆಸಬೇಕು’ ಎಂದೂ ಅವರು ತಿಳಿಸಿದ್ದಾರೆ. 

‘ಆದರೆ, ಜಸ್‌ಪ್ರೀತ್‌ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಅವರು ಫುಟ್‌ಬಾಲ್‌ ಆಡದಿರುವುದೇ ಉತ್ತಮ. ಈ ಕ್ರೀಡೆಯ ತಂತ್ರಗಾರಿಕೆಯೇ ಅವರಿಗೆ ತಿಳಿದಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. 

‘ರೋಹಿತ್‌ ಶರ್ಮಾ ಕೂಡ ಕೆಟ್ಟ ಫುಟ್‌ಬಾಲ್‌ ಆಟಗಾರ. ಕೇವಲ ಚೆಂಡನ್ನು ಪಾಸ್‌ ಮಾಡುವುದಷ್ಟೇ ಅವರಿಗೆ ಗೊತ್ತು. ಜಹೀರ್‌ ಖಾನ್‌ ಕೂಡ ಕಾಲ್ಚೆಂಡಿನ ಆಟಕ್ಕೆ ಸೂಕ್ತ ಅಲ್ಲ. ಇನ್ನೂ ಆಶಿಶ್‌ ನೆಹ್ರಾ ಅವರು ಫುಟ್‌ಬಾಲ್‌ ಆಡಿದಾಗಲೆಲ್ಲ ಗಾಯಗೊಳ್ಳುತ್ತಾರೆ. ಹಾಗಾಗಿ ಅವರು ಈ ಕ್ರೀಡೆಯಿಂದ ಹೊರಗುಳಿಯುವುದೇ ಉತ್ತಮ’ ಎಂದು ಕೂಡ ಅವರು ತಿಳಿಸಿದ್ದಾರೆ.

‘ನನ್ನ ಅಭಿಪ್ರಾಯದ ಪ್ರಕಾರ ಮಹೇಂದ್ರ ಸಿಂಗ್‌ ದೋನಿ ಅವರು ಎಲ್ಲ ದೃಷ್ಠಿಯಿಂದಲೂ ಉತ್ತಮ ಫುಟ್‌ಬಾಲ್‌ ಅಟಗಾರ’ ಎಂದು ಅವರು ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !