ಭಾನುವಾರ, ಡಿಸೆಂಬರ್ 4, 2022
20 °C

ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್: ಭಾರತ ತಂಡ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ್ (ಪಿಟಿಐ): ಇಲ್ಲಿ ನಡೆಯಲಿರುವ ಫಿಫಾ  17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್ ಟೂರ್ನಿಯ ಪಂದ್ಯಗಳಿಗೆ ತಂಡವನ್ನು ಬುಧವಾರ ಘೋಷಿಸಲಾಯಿತು. 

ಮುಖ್ಯ ಕೋಚ್ ಥಾಮಸ್ ಡೆನರ್ಬಿ ಅವರು 21 ಆಟಗಾರ್ತಿಯರ ತಂಡವನ್ನು ಪ್ರಕಟಿಸಿದ್ದಾರೆ. ತಂಡವು ಎ ಗುಂಪಿನಲ್ಲಿ ಆಡಲಿದೆ. ಅಮೆರಿಕ, ಮೊರಾಕ್ಕೊ ಹಾಗೂ ಬ್ರೆಜಿಲ್ ಇದೇ ಗುಂಪಿನಲ್ಲಿವೆ. ಅಕ್ಟೋಬರ್ 11ರಿಂದ ಇಲ್ಲಿಯ ಕಳಿಂಗ ಕ್ರೀಡಾಂಗಣದಲ್ಲಿ ಟೂರ್ನಿ ಆರಂಭವಾಗಲಿದೆ.

ತಂಡ:  ಗೋಲ್‌ಕೀಪರ್ಸ್: ಮೊನಾಲಿಷಾದೇವಿ ಮೋರಾಂಗ್ತೆಮ್, ಮೆಲೊಡಿ ಚಾನು ಕೀಶಮ್, ಅಂಜಲಿ ಮುಂಡಾ.  ಡಿಫೆಂಡರ್ಸ್: ಅಸ್ತಮ್ ಒರೆಯಾನ್, ಕಾಜಲ್, ನಕೆತಾ, ಪೂರ್ಣಿಮಾ ಕುಮಾರಿ, ವರ್ಷಿಕಾ, ಶಿಲ್ಕಿದೇವಿ ಹೆಮಮ್. ಮಿಡ್‌ಫೀಲ್ಡರ್ಸ್: ಬಬಿನಾ ದೇವಿ ಲಿಶಮ್, ನೀತು ಲಿಂಡಾ, ಶೈಲಜಾ ಶುಭಾಂಗಿ ಸಿಂಗ್. ಫಾರ್ವರ್ಡ್ಸ್: ಅನಿತಾಕುಮಾರಿ, ಲಿಂಡ್ ಕೋಮ್ ಸರ್ಟೊ, ನೆಹಾ, ರಜಿಯಾ ದೇವಿ ಲೈಶ್ರಮ್, ಶೆಲಿಯಾದೇವಿ ಲೊಕ್ಟೊಂಗ್‌ಬಮ್, ಕಾಜೊಲ್ ಹಬರ್ಟ್ ಡಿಸೋಜಾ, ಲಾವಣ್ಯ ಉಪಾಧ್ಯಾಯ, ಸುಧಾ ಅಂಕಿತಾ ಟಿರ್ಕಿ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು