ಗುರುವಾರ , ಏಪ್ರಿಲ್ 9, 2020
19 °C

ಭಾರತದಲ್ಲಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್

ಪಿಟಿಐ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ: ಭಾರತವು 2022ರ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ನೆರವಾಗುವ ದೃಷ್ಟಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಮುಂದಾಗಿದೆ. 

ಈ ವರ್ಷಾಂತ್ಯದಲ್ಲಿ 17 ವರ್ಷದೊಳಗಿನ ಮಹಿಳೆಯರ ಫಿಫಾ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಟೂರ್ನಿಗೆ ಆತಿಥ್ಯ ವಹಿಸುವುದರಿಂದ ಏಷ್ಯಾಕಪ್ ನಡೆಸಲು ಇದು ಸೂಕ್ತ ಸ್ಥಳ ಎಂಬ ತೀರ್ಮಾನಕ್ಕೆ ಕಾನ್ಫೆಡರೇಷನ್ ಬಂದಿದೆ. ಚೀನಾ ತೈಪೆ ಮತ್ತು ಉಜ್ಬೆಕಿಸ್ತಾನ್ ಕೂಡ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸಿದ್ದವು. ಫಿಫಾ 17 ವರ್ಷದೊಳಗಿನವರ ಟೂರ್ನಿ ನಡೆಯಲಿರುವ ಡಿ.ವೈ.ಪಾಟೀಲ ಕ್ರೀಡಾಂಗಣ, ಟ್ರಾನ್ಸ್ ಸ್ಟೇಡಿಯಾ ಅರೆನಾ ಮತ್ತು ಫತೋರ್ಡ ಕ್ರೀಡಾಂಗಣಗಳಲ್ಲಿ ಏಷ್ಯಾಕಪ್‌ ಪಂದ್ಯಗಳು ಕೂಡ ನಡೆಯಲಿವೆ ಎಂದು ಕಾನ್ಫೆಡರೇಷನ್ ತಿಳಿಸಿದೆ.

2016ರಲ್ಲಿ 16 ವರ್ಷದೊಳಗಿನವರ ಎಎಫ್‌ಸಿ ಚಾಂಪಿಯನ್‌ಷಿಪ್‌ ಮತ್ತು 2017ರಲ್ಲಿ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿ ಭಾರತದಲ್ಲೇ ನಡೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು