ಶುಕ್ರವಾರ, ಜನವರಿ 24, 2020
22 °C

ಜನಾಂಗೀಯ ನಿಂದನೆ: ತನಿಖೆಗೆ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಬೈ ಸಿಟಿ ಎಫ್‌ಸಿ ತಂಡದ ಕೋಚ್‌ ಜೋರ್ಗೆ ಕೋಸ್ಟಾ ಅವರು ಸೌದಿ ಅರೇಬಿಯಾದ ರೆಫರಿ ಟರ್ಕಿ ಮೊಹಮ್ಮದ್‌ ಅಲ್‌ ಖುದಯರ್‌ ವಿರುದ್ಧ ಜನಾಂಗೀಯ ನಿಂದನೆ ಆರೋಪ ಹೊರಿಸಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌), ಶಿಸ್ತು ಸಮಿತಿಗೆ ಸೂಚಿಸಿದೆ.

ಭಾನುವಾರ ಬೆಂಗಳೂರಿನಲ್ಲಿ ನಡೆದಿದ್ದ ಬಿಎಫ್‌ಸಿ ಎದುರಿನ ಐಎಸ್‌ಎಲ್‌ ಪಂದ್ಯದ ವೇಳೆ ಟರ್ಕಿ ಅವರು ಮುಂಬೈ ತಂಡದ ಸರ್ಜಿ ಕೆವಿನ್‌ ಅವರನ್ನು ಕೋತಿ ಎಂದು ಮೂದಲಿಸಿದ್ದರು. ಈ ಸಂಬಂಧ ಜೋರ್ಗೆ ಅವರು ಎಐಎಫ್‌ಎಫ್‌ಗೆ ದೂರು ನೀಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು