ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯ ಮಾರ್ಚ್ 18 ರಂದು ಮಡಗಾಂವ್‌ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ.

ತಂಡಗಳ ಅಭ್ಯಾಸಕ್ಕೆ ಮೈದಾನಗಳು ಲಭ್ಯವಿರುವುದು ಮತ್ತು ಮೂಲಸೌಕರ್ಯವನ್ನು ನೋಡಿಕೊಂಡು ಫೈನಲ್ ಪಂದ್ಯದ ಆತಿಥ್ಯಕ್ಕೆ ಸಂಘಟಕರು ಗೋವಾವನ್ನು ಆಯ್ಕೆ ಮಾಡಿದ್ಧಾರೆ.

ಟೂರ್ನಿಯ ಪ್ಲೇ ಆಫ್ ಪಂದ್ಯಗಳು ಮಾರ್ಚ್ 3 ರಿಂದ ನಡೆಯಲಿವೆ. ಮುಂಬೈ ಸಿಟಿ ಎಫ್‌ಸಿ, ಹೈದರಾಬಾದ್ ಎಫ್‌ಸಿ, ಎಟಿಕೆ ಮೋಹನ್ ಬಾಗನ್, ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿವೆ. ಇನ್ನೊಂದು ಸ್ಥಾನಕ್ಕಾಗಿ ಒಡಿಶಾ ಎಫ್‌ಸಿ ಮತ್ತು ಎಫ್‌ಸಿ ಗೋವಾ ನಡುವೆ ಪೈಪೋಟಿ ಇದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದಿರುವ ಮುಂಬೈ ಮತ್ತು ಹೈದರಾಬಾದ್ ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿವೆ.

ಇನ್ನೆರಡು ಸ್ಥಾನಗಳನ್ನು ನಿರ್ಣಯಿಸಲು ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ 3–6 ಸ್ಥಾನ ಪಡೆದ ತಂಡಗಳು ಹಾಗೂ 4–5 ಸ್ಥಾನಗಳನ್ನು ಪಡೆದ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ. ಗೆಲುವು ಪಡೆಯುವ ತಂಡ ನಾಲ್ಕರಘಟ್ಟ ಪ್ರವೇಶಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.