ಶುಕ್ರವಾರ, ಜುಲೈ 1, 2022
28 °C

ಐಎಸ್‌ಎಲ್: ಗೋವಾಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ: ಜಾರ್ಜ್ ಓಟಿಜ್ ಮೆಂಡೋನ್ಸಾ ಗಳಿಸಿದ ಎರಡು ಗೋಲು ಗಳ ಬಲದಿಂದ ಗೋವಾ ಎಫ್‌ಸಿ ತಂಡ ಗುರುವಾರ ಐಎಸ್‌ಎಲ್‌ ಫುಟ್‌ ಬಾಲ್ ಟೂರ್ನಿ ಯಲ್ಲಿ ಜಯಿಸಿತು.

ಫತೋರ್ಡ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಗೋವಾ ತಂಡವು 3–0 ಯಿಂದ ಜೆಮ್ಶೆಡ್‌ಪುರ ವಿರುದ್ಧ ಜಯಿಸಿತು. 19 ಮತ್ತು 52ನೇ ನಿಮಿಷದಲ್ಲಿ ಮೆಂಡೋನ್ಸಾ ಗೋಲು ಹೊಡೆದರು. 89ನೇ ನಿಮಿಷದಲ್ಲಿ ಇವಾನ್ ಗ್ಯಾರಿಡೋ ಗೋನ್ಸಾಲ್ವೆಸ್ ಗೋಲು ಗಳಿಸಿದರು. 18 ಪಾಯಿಂಟ್ಸ್‌ಗಳೊಂದಿಗೆ ಗೋವಾ ತಂಡವು ಮೂರನೇ ಸ್ಥಾನಕ್ಕೇರಿದೆ. ಜೆಮ್ಶೆಡ್‌ಪುರ ತಂಡವು 13 ಪಾಯಿಂಟ್ ಗಳಿಸಿದೆ.

ಈಸ್ಟ್ ಬೆಂಗಾಲ್‌ಗೆ ಬ್ಲಾಸ್ಟರ್ಸ್‌ ಎದುರಾಳಿ: ವಾಸ್ಕೊದ ತಿಲಕ್‌ ಮೈದಾನ ದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ. 

ಎಸ್‌ಸಿ ಈಸ್ಟ್ ಬೆಂಗಾಲ್ ಆರಂಭ ದಲ್ಲಿ ಕಳಪೆ ಆಟ ಆಡಿದರೂ ಹಿಂದಿನ ಮೂರು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರಿಸಿದೆ. ‌ಡಿಸೆಂಬರ್‌ನಲ್ಲಿ ಮೊದಲ ಲೆಗ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಗೋಲು ಗಳಿಸಿ ಕೇರಳ ಬ್ಲಾಸ್ಟರ್ಸ್‌ 1–1ರಿಂದ ಡ್ರಾ ಮಾಡಿಕೊಂಡಿತ್ತು. ಆಗ ಬೆಂಗಾಲ್ ತಂಡ ನಿರೀಕ್ಷೆಗೆ ತಕ್ಕ ಆಟ ಪ್ರದರ್ಶಿಸಲಾಗದೆ ಸಂಕಷ್ಟದಲ್ಲಿತ್ತು. ಆದರೆ ಕಳೆದ ಐದು ಪಂದ್ಯಗಳಲ್ಲಿ ಈಸ್ಟ್ ಬೆಂಗಾಲ್ ಸೋಲು ಕಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು