ಭಾನುವಾರ, ಜನವರಿ 24, 2021
26 °C

ತವರಿನಲ್ಲಿ ಜಯಿಸಿದ ಚೆನ್ನೈಯಿನ್ ಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಆಲ್‌ರೌಂಡ್ ಆಟದ ಮೂಲಕ ಎಫ್‌ಸಿ ಗೋವಾವನ್ನು ಕಂಗೆಡಿಸಿದ ಚೆನ್ನೈಯಿನ್ ಎಫ್‌ಸಿ ತಂಡ ಐಎಸ್‌ಎಲ್ ಒಂದನೇ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಜಯಭೇರಿ ಮೊಳಗಿಸಿತು. 

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಯಕ ಲೂಸಿಯನ್ ಗೋಯನ್ (54ನೇ ನಿಮಿಷ), ಅನಿರುದ್ಧ ಥಾಪ (61ನೇ ನಿ), ಎಲಿ ಸಾಬಿಯಾ (77ನೇ ನಿ) ಮತ್ತು ಲಾಲಿಯಂಜ್ವಾಲ ಚಾಂಗ್ಟೆ (79ನೇ ನಿ) ಗಳಿಸಿದ ಗೋಲುಗಳ ಬಲದಿಂದ ಚೆನ್ನೈಯಿನ್ 4–1ರಲ್ಲಿ ಎದುರಾಳಿಗಳನ್ನು ಮಣಿಸಿತು. 

ಇತ್ತೀಚೆಗಷ್ಟೇ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಗುಂಪು ಹಂತಕ್ಕೆ ನೇರ ಪ್ರವೇಶ ಪಡೆದ ಭಾರತದ ಮೊದಲ ತಂಡ ಎಂಬ ದಾಖಲೆ ಬರೆದ ಎಫ್‌ಸಿ ಗೋವಾ ಆಕ್ರಮಣ ಮತ್ತು ರಕ್ಷಣೆ ಸಮವಾಗಿ ಮೇಳೈಸಿದ್ದ ಚೆನ್ನೈಯಿನ್ ಆಟಕ್ಕೆ ಬೆರಗಾಯಿತು. 

ತವರಿನ ಪ್ರೇಕ್ಷಕರ ಮುಂದೆ ಆರಂಭದಿಂದಲೇ ಆಕ್ರಮಣಕಾಗಿ ಆಟಕ್ಕೆ ಮುಂದಾದ ಚೆನ್ನೈಯಿನ್‌ಗೆ ಮೊದಲಾರ್ಧದಲ್ಲಿ ಗೋಲು ಗಳಿಸಲು ಆಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಮಿಂಚಿನ ಆಟವಾಡಿ ಗೋಲುಗಳನ್ನು ಗಳಿಸಿ ಗ್ಯಾಲರಿಗಳಲ್ಲಿ ಸಂಚಲನ ಉಂಟು ಮಾಡಿತು. ಬದಲಿ ಆಟಗಾರ ಸೇವಿಯರ್ ಗಾಮಾ 85ನೇ ನಿಮಿಷದಲ್ಲಿ ಗಳಿಸಿದ ಗೋಲು ಗೋವಾದ ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು