ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್ ಹ್ಯಾಷ್‌ಟ್ಯಾಗ್‌ನಲ್ಲಿ ಮಾತೃಭಾಷೆ ಗಂಧ

Last Updated 23 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ನಮ್ಮ ಬೆಂಗಳೂರು’, ‘ಎನ್ನುಂ ಯೆಲ್ಲೋ’, ‘ಆಮ್ಚಿ ಸಿಟಿ’, ‘ಕದಂ ನಯಾ ದಮ್’… ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬೇರೆ ಬೇರೆ ರಾಜ್ಯಗಳ ತಂಡಗಳು ಟ್ವಿಟರ್‌ನಲ್ಲಿ ಬಳಸುತ್ತಿರುವ ಟ್ಯಾಗ್‌ ಲೈನ್‌ನ ತುಣುಕುಗಳು ಇವು.

ಈ ಬಾರಿ ಅತಿ ಹೆಚ್ಚು, 11 ತಂಡಗಳು ಐಎಸ್‌ಎಲ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಇವುಗಳ ಪೈಕಿ ಒಂದು ತಂಡ ಪೋರ್ಚುಗೀಸ್‌ ಮತ್ತು ಎರಡು ತಂಡಗಳು ಹಿಂದಿಯನ್ನು ಬಳಸಿಕೊಂಡಿದ್ದರೆ ಉಳಿದ ತಂಡಗಳೆಲ್ಲವೂ ಸ್ಥಳೀಯ ಭಾಷೆಗೇ ಆದ್ಯತೆ ನೀಡಿವೆ. ಸಾರ್ವತ್ರಿಕ ಅವಶ್ಯಕತೆಗಾಗಿ ಇಂಗ್ಲಿಷ್‌ನಲ್ಲೂ ಟ್ಯಾಗ್‌ಲೈನ್ ಇದೆ.

ದಕ್ಷಿಣ ಭಾರತದ ನಾಲ್ಕು ತಂಡಗಳ ಪೈಕಿ ಹೈದರಾಬಾದ್ ಎಫ್‌ಸಿ ಮಾತ್ರ ಹಿಂದಿ ಬಳಸಿವೆ. ಉಳಿದಂತೆ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯ ಸೊಬಗು ಮೇಳೈಸಿದೆ.

ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ‘ನಮ್ಮ ಬೆಂಗಳೂರು’ ಎಂಬುದನ್ನೇ ‘ಧ್ಯೇಯವಾಕ್ಯ’ ಮಾಡಿಕೊಂಡಿದೆ. ಇಂಗ್ಲಿಷ್‌ನಲ್ಲಿ ವಿಆರ್‌ ಬಿಎಫ್‌ಸಿ (ನಾವು ಬಿಎಫ್‌ಸಿಯವರು) ಎಂಬ ವಾಕ್ಯವೂ ಇದೆ. ಚೆನ್ನೈಯಿನ್ ಎಫ್‌ಸಿ ‘ಆಟ್ಟಂ ರೀಲೋಡೆಡ್’ ಎಂಬುದರ ಜೊತೆಯಲ್ಲಿ ಇಂಗ್ಲಿಷ್‌ನಲ್ಲಿ ಆಲ್ ಇನ್ ಫಾರ್ ಚೆನ್ನೈಯಿನ್ ಎಂದೂ ಬಳಸಿಕೊಂಡಿದೆ. ಹೈದರಾಬಾದ್ ಎಫ್‌ಸಿ ‘ಹರ್ ಕದಂ ನಯಾ ದಮ್’ ಎಂಬುದರ ಜೊತೆಯಲ್ಲಿ ಹೈದರಾಬಾದ್ ಎಫ್‌ಸಿ ಎಂದು ಬಳಸುತ್ತಿದೆ.

ಹೊಸ ತಂಡವಾದ ಈಸ್ಟ್ ಬೆಂಗಾಲ್ ವಿಆರ್‌ಎಸ್‌ಸಿಇಬಿ ಎಂಬುದರ ಜೊತೆಯಲ್ಲಿ ಬಂಗಾಳಿಯಲ್ಲಿ ‘ಚಲಂ ಆಚಿ ತಕ್ಬೊ’ (ಎಂದೆಂದಿಗೂ ನಾವು ಜೊತೆಯಲ್ಲಿದ್ದೇವೆ) ಎಂದೂ ಬಳಸಿಕೊಂಡಿದೆ. ಎಟಿಕೆ ಮೋಹನ್ ಬಾಗನ್ ತಂಡ ಮರಿನರ್ಸ್ ಎಂದೂ ‘ಜಾಯ್ ಮೋಹನ್‌ ಬಾಗನ್’ ಎಂದೂ ಬಳಸಿಕೊಂಡಿದೆ. ಬಿಎಫ್‌ಸಿ ಕನ್ನಡದಲ್ಲಿ ಬರೆದಿರುವಂತೆ ಒಡಿಶಾ ಎಫ್‌ಸಿ ಒರಿಯಾ ಭಾಷೆಯಲ್ಲೇ ಟ್ಯಾಗ್‌ಲೈನ್ ಬರೆದಿದೆ. ಅದು, ‘ಆಮ ಟೀಮ್; ಆಮ ಗೇಮ್’ ಎಂದು ಹೇಳುತ್ತಿದೆ. ಜೊತೆಯಲ್ಲಿ ಇಂಗ್ಲಿಷ್‌ನ ಒಡಿಶಾ ಎಫ್‌ಸಿ ಎಂಬುದನ್ನೂ ಉಳಿಸಿಕೊಂಡಿದೆ. ಜಮ್ಶೆಡ್‌ಪುರ ಎಫ್‌ಸಿ ತಂಡ ಇಂಗ್ಲಿಷ್‌ನಲ್ಲೂ ಹಿಂದಿಯಲ್ಲೂ ಜಮ್ಕೆ ಖೇಲೊ ಎಂಬ ಟ್ಯಾಗ್ ಲೈನ್ ಇರಿಸಿಕೊಂಡಿದೆ. ಮುಂಬೈ ಸಿಟಿ ಎಫ್‌ಸಿ ತಂಡ ಮುಂಬೈ ಸಿಟಿ ಎಂದೂ ‘ಆಮ್ಚಿ ಸಿಟಿ’ (ನಮ್ಮ ನಗರ) ಎಂದೂ ಇರಿಸಿಕೊಂಡಿದೆ. ಕೇರಳ ಬ್ಲಾಸ್ಟರ್ಸ್‌ ಇಂಗ್ಲಿಷ್‌ನಲ್ಲಿ ವೈ ವಿ ಪ್ಲೇ (ನಾವು ಯಾಕಾಗಿ ಆಡುತ್ತಿದ್ದೇವೆ) ಎಂದೂ ಮಲಯಾಳಂನಲ್ಲಿ ಎನ್ನುಂ ಯೆಲ್ಲೋ (ಎಂದೆಂದಿಗೂ ಹಳದಿ) ಎಂದೂ ಬರೆದುಕೊಂಡಿದ್ದರೆ ಎಫ್‌ಸಿ ಗೋವಾ ತಂಡವು ಪೋರ್ಚುಗೀಸ್ ಭಾಷೆಯ ಫೊರ್ಸಾ ಗೋವಾ ಮತ್ತು ಇಂಗ್ಲಿಷ್‌ನ ರೈಸ್ ಎಗೇನ್‌ ಎಂಬುದನ್ನು ಬಳಸಿಕೊಂಡಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡವು ಸ್ಟ್ರಾಂಗರ್ ಆ್ಯಸ್ ಒನ್ ಮತ್ತು ಎನ್‌ಇಯುಎಫ್‌ಸಿ ಎಂದು ಬಳಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT