ಬುಧವಾರ, ಫೆಬ್ರವರಿ 26, 2020
19 °C

ಗೋವಾ ತಂಡಕ್ಕೆ ಮಣಿದ ಎಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಗಾಂವ್‌: ಆಕ್ರಮಣದ ಆಟಕ್ಕೆ ಹೆಸರಾದ ಎರಡು ತಂಡಗಳ ನಡುವೆ ನಡೆದ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಸೆಣಸಾಟದಲ್ಲಿ ಆತಿಥೇಯ ಗೋವಾ ತಂಡ 2–1 ಗೋಲುಗಳಿಂದ ಎಟಿಕೆ ತಂಡವನ್ನು ಸೋಲಿಸಿತು. 

ಈ ಪಂದ್ಯವನ್ನು ಗೆಲ್ಲುವ ಮೂಲಕ ಗೋವಾ 15 ಅಂಕಗಳೊಡನೆ ಲೀಗ್‌ನಲ್ಲಿ ಮೊದಲ ಸ್ಥಾನಕ್ಕೆ ಏರಿತು. ಅಗ್ರಸ್ಥಾನದಲ್ಲಿದ್ದ ಎಟಿಕೆ (14 ಅಂಕ) ಎರಡನೇ ಸ್ಥಾನಕ್ಕೆ ಇಳಿಯಿತು. ಮೂರೂ ಗೋಲುಗಳು ಉತ್ತರಾರ್ಧದಲ್ಲಿ ಬಂದವು. ಆತಿಥೇಯ ತಂಡವೇ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿತ್ತು.

60ನೇ ನಿಮಿಷ ಮೊರ್ತಡಾ ಗೋವಾ ತಂಡಕ್ಕೆ ಮುನ್ನಡೆ ಒದಗಿಸಿದರು. ನಾಲ್ಕು ನಿಮಿಷಗಳ ನಂತರ, ಜಾಬಿ ಜಸ್ಟಿನ್‌ ಎಟಿಕೆ ತಂಡದ ಪರ ಗೋಲು ಹೊಡೆ ದರು. ಮರು ನಿಮಿಷವೇ ಗೋವಾ ತಂಡ ಫೆರಾನ್‌ ಕೊರೊಮಿನಾಸ್‌ ಮೂಲಕ ನಿರ್ಣಾಯಕ ಗೋಲು ಗಳಿಸಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು